Belagavi NewsBelgaum NewsKannada NewsKarnataka NewsLatestPolitics

*ರಾಜಕಾರಣ ನಿಂತ ನೀರಲ್ಲ, ಯಾವಾಗಬೇಕಾದರೂ ಬದಲಾಗಬಹುದು ಎಂದ ಸಚಿವ ಕೆ.ಎನ್.ರಾಜಣ್ಣ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜಕಾರಣ ನಿಂತ ನೀರಲ್ಲ. ರಾಜಕಾರಣ ಎನ್ನುವಂಥದ್ದು ಇದ್ದಂತೆ ಯಾವಾಗಲು ಇರುವುದಿಲ್ಲ. ಕುಮಾರಸ್ವಾಮಿ ಬಿಜೆಪಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು‌ ಲೋಕಸಭಾ ಚುನಾವಣೆ ಎದುರಿಸುವ ವಿಚಾರ ಅವರಿಗೆ‌ ಬಿಟ್ಟಿದ್ದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ನಿಂತ ನೀರಲ್ಲ. ಯಾವಾಗ ಬೇಕಾದರೂ ಬದಲಾಗಬಹುದು.ಕುಮಾರಸ್ವಾಮಿ ಅವರು ಸ್ವತಂತ್ರರು. ಅವರು ಯಾರ ಬೇಕಾದರೂ ಜೊತೆ ಸೇರಿ ಲೋಕಸಭಾ ಚುನಾವಣೆ ಮಾಡಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರು.

ಸಹಕಾರ ಇಲಾಖೆಯಲ್ಲಿ ಅವ್ಯವಹಾರ ಆಗಿದೆ. ಎಲ್ಲಿಯೋ ರಸ್ತೆಯಲ್ಲಿ ಮಾತನಾಡುವವರ ಬಗ್ಗೆ ಉತ್ತರಿಸಲು ಸಾಧ್ಯವಿಲ್ಲ. ಸಹಕಾರಿ ಬ್ಯಾಂಕ್, ಬೇರೆ ಬೇರೆ ಸಹಕಾರ ಸಂಸ್ಥೆಗಳು ಉತ್ತಮ ರೀತಿಯಲ್ಲಿ ನಡೆದಿವೆ. ಎಲ್ಲಿಯಾದರೂ ದೂರುಗಳು ಬಂದರೆ ತತ್ವರಿತ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ಹೆಚ್ಚು ತಲೆ ಕೆಡಿಸಿಕೊಂಡಿದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಸವರಾಜ ಬೊಮ್ಮಾಯಿ ಅವರು ಈ‌ ಹಿಂದೆ ಸರಕಾರ ನಡೆಸಿದ್ದ ಆಧಾರದ ಮೇಲೆ ಹೇಳಿರಬೇಕು ನಮ್ಮ ಸರಕಾರದಲ್ಲಿ ಅಂಥದ್ದೇನು ಇಲ್ಲ ಎಂದರು.

Home add -Advt

ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ,‌ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

Back to top button