
ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಬಾಕಿಯಿದ್ದರೂ ಸಿಎಂ ಬಸವರಾಜ್ ಬೊಮ್ಮಾಯಿ ಮಾತ್ರ ಶೀಘ್ರದಲ್ಲಿಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಎಂದು ಹೇಳುತ್ತಾ ಕಾಲ ಮುಂದೂಡುತ್ತಲೇ ಇದ್ದಾರೆ. ಸಚಿವ ಸ್ಥಾನಕ್ಕಾಗಿ ಹಂಬಲಿಸಿ ಬೇಸರಗೊಂಡಿರುವ ಮಾಜಿ ಸಚಿವರು ಈಗ ಸಚಿವ ಸ್ಥಾನದ ಆಸೆಯನ್ನೇ ಬಿಟ್ಟಿರುವುದಾಗಿ ಹೇಳಿದ್ದಾರೆ.
ಮಂತ್ರಿ ಆದ್ರೆ ಆಯ್ತು ಇಲ್ಲದಿದ್ರೆ ಇಲ್ಲ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತ್ನಾಡಿದ ಈಶ್ವರಪ್ಪ, ನನ್ನನ್ನು ಸಚಿವನನ್ನಾಗಿ ಮಾಡಬೇಕು ಎಂದು ಈ ಹಿಂದೆ ಸಿಎಂ ಬೊಮ್ಮಾಯಿ ಅವರ ಬಳಿ ಅಪೇಕ್ಷೆ ವ್ಯಕ್ತಪಡಿಸಿದ್ದೆ. ಆ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡಿದಾಗಿ ಸ್ಪಷ್ಟವಾಗಿ ಅವರು ಹೇಳಿದ್ದರು. ಅವರು ಪ್ರಯತ್ನ ಮಾಡುತ್ತಿರಬಹುದು ನನಗೆ ಗೊತ್ತಿಲ್ಲ, ಆಡಳಿತ ನದೆಸುವುದು, ಮಂತ್ರಿ ಮಾಡುವುದು ಅಷ್ಟು ಸುಲಭವಲ್ಲ. ಸರ್ಕಾರ ಚನ್ನಾಗಿ ನಡೆಯುತ್ತಿದೆ. ನನ್ನನ್ನು ಸಚಿವನನ್ನಾಗಿ ಮಾಡಿದರೆ ಸಂತೋಷ. ಇಲ್ಲವಾದರೆ ಇಲ್ಲ. ನಾನು ಸಚಿವ ಸ್ಥಾನದ ಆಸೆ ಬಿಟ್ಟಿದ್ದೇನೆ ಎಂದು ಹೇಳಿದರು.
ಸರ್ಕಾರದಲ್ಲಿ ಮಂತ್ರಿಯಾಗಬೇಕು ಎಂದು ನಾನೇ ಒಂದು ಸಮಸ್ಯೆಯಾಗಲು ಇಷ್ಟಪಡುವುದಿಲ್ಲ. ಸಚಿವನನ್ನಾಗಿ ಮಾಡಿದರೆ ಆಗುತ್ತೇನೆ ಇಲ್ಲವಾದರೆ ತಲೆಕೆಡಿಸಿಕೊಳ್ಳಲ್ಲ ಎಂದರು.
ಇನ್ನು ಬಿಜೆಪಿ ಪಕ್ಷ ಏನು ಮಾಡುತ್ತದೆ ಎಂಬುದನ್ನು ಯಾರಿಗೂ ಹೇಳಲ್ಲ. ಶ್ರೀಕೃಷ್ಣ ಪರಮಾತ್ಮನಿಗೂ ಅರ್ಥವಾಗದಷ್ಟು ತಂತ್ರಗಾರಿಕೆ ಕೇಂದ್ರ ನಾಯಕರಿಗೆ ಇದೆ. ಬೇರೆ ಬೇರೇ ರಾಜ್ಯಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಕೊಟ್ಟು ಅಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ನನಗಿಂತ ಹೆಚ್ಚಿನ ಪ್ರಭಾವಿ, ಬುದ್ಧಿವಂತರು, ಕೆಲಸ ಮಾಡುವವರು ಇನ್ನೂ ಇರಬಹುದು ಸರ್ವೆ ಮೂಲಕ ಎಲ್ಲವನ್ನೂ ಕೇಂದ್ರ ತಿಳಿದುಕೊಳ್ಳುತೆ. 224 ಕ್ಷೇತ್ರಗಳಲ್ಲಿಯೂ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ.
*ಹಾವೇರಿ BJP ಪಾಳಯದಲ್ಲಿ ಸಂಚಲನ ಮೂಡಿಸಿದ ಡಿ.ಕೆ.ಶಿವಕುಮಾರ್ ಹೇಳಿಕೆ*
https://pragati.taskdun.com/d-k-shivakumarhaveribjp-mlascongress/