ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೊನ್ನೆಯಷ್ಟೇ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ವಿವಾದಕ್ಕೀಡಾಗಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಈಗ ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ, ಕೆಟ್ಟ ಪದ ಬಳಕೆಗಳನ್ನು ಮಾಡಿದ್ದಾರೆ. ಸಚಿವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು ಈಶ್ವರಪ್ಪಗೆ ಹುಚ್ಚು ಹಿಡಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಶ್ವರಪ್ಪ ಹೇಳಿಕೆಗೆ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸ್ಕೃತಿ ಸಂಸ್ಕಾರ ಇರುವವರು ಅಂಥ ಪದ ಬಳಕೆ ಮಾಡಲ್ಲ, ಈಶ್ವರಪ್ಪಗೆ ಸಂಸ್ಕೃತಿ, ಸಂಸ್ಕಾರವಿಲ್ಲ, ಅಂತಹ ಹಾದಿಯಲ್ಲಿ ಬೆಳೆದುಬಂದಿದ್ದಾರೆ. ಸಚಿವರಾದವರಿಗೆ ಮಾತಿನ ಮೇಲೆ ಹಿಡಿತವಿರಬೇಕು ಇದು ಅವರ ಸಂಸ್ಕೃತಿ ತೋರುತ್ತದೆ ಎಂದು ಕಿಡಿಕಾರಿದ್ದಾರೆ.
ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಪ್ರತಿಕ್ರಿಯಿಸಿ ಕೆಟ್ಟ ಭಾಷೆ, ಕೆಟ್ಟ ಪದ ಬೆರೆಯವರಿಗೂ ಗೊತ್ತಿದೆ. ಅದೇ ಪದಗಳನ್ನು ಈಶ್ವರಪ್ಪ ಮೇಲೆ ಬಳಸಿದರೆ ಹೇಗಿರುತ್ತೆ. ಇದು ಈಶ್ವರಪ್ಪನವರ ತಪ್ಪಲ್ಲ, ಅವರನ್ನು ಬೆಳೆಸಿದವರ ತಪ್ಪು. ಮೊದಲು ಈಶ್ವರಪ್ಪನವರನ್ನು ಪಕ್ಷದಿಂದ ಕಿತ್ತುಹಾಕಬೇಕು ಎಂದು ಗುಡುಗಿದ್ದಾರೆ.
ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಈಶ್ವರಪ್ಪ ನೋಟ್ ಎಣಿಸುವ ಮಷಿನ್ ಇಟ್ಟುಕೊಂಡರೂ ಸಿಎಂ ಆಗಲಿಲ್ಲ. ಮುಖ್ಯಮಂತ್ರಿ ಆಗಲು ಯತ್ನಿಸಿದ್ದರು, ಡಿಸಿಎಂ ಆಗಲು ಯತ್ನಿಸಿದ್ದರು ಅದ್ಯಾವುದೂ ಸಾಧ್ಯವಾಗದೇ ಮತ್ತೆ ಸಚಿವರಾಗಿದ್ದಾರೆ. ಹೀಗಾಗಿ ಅವರಿಗೆ ಹುಚ್ಚು ಹಿಡಿದಿದೆ. ಅವರನ್ನು ಸಂಪುಟದಿಂದ ವಜಾಗೊಳಿಸಿ, ಮೊದಲು ನಿಮ್ಹಾನ್ಸ್ ಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿಗೆ ಇನ್ನೊಂದು ಸಂಕಷ್ಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ