ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ನಳೀನ್ ಕುಮಾರ್ ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ, ಅವರನ್ನು ಬಲಿಪಶು ಮಾಡಲು ಹೊರಟಂತಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ಒಂದುವೇಳೆ ನನ್ನ ವಿರುದ್ಧ ಸಂಚು ನಡೆದರೂ ನಾನು ತಲೆ ಕೆಡಿಸಿಕೊಳ್ಳಲ್ಲ, ಅಧಿಕಾರ ಹೋದರೆ ಒಂದು ಗೂಟ ಹೋಯ್ತು ಅಂದುಕೊಳ್ತೀನಿ. ನಾನು ಯಾವತ್ತೂ ಗೂಟಕ್ಕೆ ಅಂಟಿಕೊಂಡು ಕುಳಿತಿಲ್ಲ ಎಂದು ಅಸಮಾಧಾನ ಹೊಸಹಾಕಿದರು. ಇದೇ ವೇಳೆ ನನಗೆ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಕೆಲಸ ಮಾಡ್ತೀನಿ. ಯುವಕರಿಗೆ ಆದ್ಯತೆ ನಿಡಿದರೆ ತಪ್ಪೇನು? ಎಂದಿದ್ದಾರೆ.
ನಮ್ಮ ರಾಜ್ಯಾಧ್ಯಕ್ಷರ ಮೇಲೆ ನನಗೆ ನಂಬಿಕೆ ಇದೆ. ಆಡಿಯೋ ತನಿಖೆಯಾಗಲಿ ಎಂದು ಸ್ವತ: ಕಟೀಲ್ ಅವರೇ ಹೇಳಿದ್ದಾರೆ. ಹಾಗಾಗಿ ಆಡಿಯೋ ಮೊದಲು ತನಿಖೆಯಾಗಲಿ ಎಂದರು.
ಆಡಿಯೋ ಕುರಿತು ನಳಿನ್ ಕುಮಾರ ಕಟೀಲು ಪ್ರತಿಕ್ರಿಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ