ಕಬಡ್ಡಿ ಹಾಗೂ ವಾಲಿಬಾಲ್ ಕ್ರೀಡಾಕೂಟ: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಟಿ-ಶರ್ಟ್ ವಿತರಣೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಡೊರ ಕಕ್ಕಯ್ಯ ಶಿಕ್ಷಣ ಸಂಸ್ಥೆಯ ಶ್ರೀ ಬಿಷ್ಟಾದೇವಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಕಬಡ್ಡಿ ಹಾಗೂ ವಾಲಿಬಾಲ್ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಬೆಳಗಾವಿ ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾವತಿಯಿಂದ ಟಿ-ಶರ್ಟ್ ವಿತರಿಸಲಾಯಿತು.
ವಿದ್ಯಾರ್ಥಿನಿಯರಿಗೆ ಬೆಳಗಾವಿ ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರು ಹಾಗೂ ಖಾನಾಪುರ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಡಾ॥ ಸೋನಾಲಿ ಸರ್ನೋಬತ ಅವರು ನಿಯತ್ ಫೌಂಡೇಶನ್ ವತಿಯಿಂದ ಸೋನಾಲಿ ತಾಯಿ ಅಭಿಮಾನಿ ಬಳಗದವರು ” ಟಿ ಶರ್ಟ್” ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ನಾಗೇಶ್ ರಾಮಜಿ, ಗ್ರಾಮೀಣ ವಿದ್ಯಾರ್ಥಿನಿಯರಿಗೆ ಕ್ರೀಡೆಯಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಶಿಕ್ಷಕರು ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ಗ್ರಾಮೀಣ ಕ್ರೀಡಾಪಟುಗಳನ್ನು ಬೆಳೆಸಲು ನಮ್ಮ ನಾಯಕರಾದ ಡಾ.ಸೋನಾಲಿ ತಾಯಿ ಅವರು ಕ್ರೀಡಾಪಟುಗಳಿಗೆ ಉನ್ನತ ಸ್ಥಾನಕ್ಕೆ ಬೆಳೆಸಲು ಸದಾ ಬೆಂಬಲ, ಪ್ರೋತ್ಸಾಹ ನೀಡುತ್ತಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಕ ರಾಮಚಂದ್ರ ಬೆನ್ನೋರ್, ಗ್ರಾಮ ಮುಖಂಡ ರಮೇಶ್ ಕೋಚೆರಿ, ಮುಖ್ಯಾಧ್ಯಾಪಕ ಈರಣಗೌಡಾ ಪಾಟೀಲ್, ಶಿಕ್ಷಕ ಎಸ್.ಎನ್.ರಾಠೋಡ, ಬಿಜೆಪಿ ಮುಖಂಡ ನಾಗೇಶ ರಾಮಜಿ, ಪರಶುರಾಮ್ ಕೋಲಕಾರ, ಕುಶಾಲ ಅಂಬೋಜಿ, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಫುಟ್ ಬಾಲ್ ಪಂದ್ಯ ವೀಕ್ಷಿಸಿ 4 ಲಕ್ಷ ರೂ.ದೇಣಿಗೆ ನೀಡುವದಾಗಿ ಘೋಷಣೆ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
https://pragati.taskdun.com/politics/belagavifootball-tournamentsatish-jarakiholi4-lakh-announce/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ