
ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಸಚಿವ ಬಿ.ಶ್ರೀರಾಮುಲು ಮತ್ತವರ ಅಳಿಯ ಮಾಜಿ ಶಾಸಕ ಟಿ.ಎಚ್. ಸುರೇಶ್‌ಬಾಬು ಒಡೆತನದ ಕಾರ್ಖಾನೆ ನಡೆಸುತ್ತಿರುವ ಉದ್ಯಮಿ ಕೈಲಾಸ್ ವ್ಯಾಸ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಕಳೆದ ಎರಡು ದಿನಗಳಿಂದ ನಿರಂತರ ಪರಿಶೀಲನೆ ನಡೆಸಿದ್ದಾರೆ.
ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಬೆಂಗಳೂರು ಹಾಗೂ ಚೆನ್ನೈ ಮೂಲದ ಹದಿನೈದು ಮಂದಿ ಅಧಿಕಾರಿಗಳ ತಂಡವು ಬೆಂಗಳೂರು, ಬಳ್ಳಾರಿ, ಕೊಪ್ಪಳದಲ್ಲಿರುವ ಕಂಪೆನಿಗಳ ಮೇಲೆ ದಾಳಿ ನಡೆಸಿದೆ.
ಕೈಲಾಸ ವ್ಯಾಸ್ ರವರ ಬಳ್ಳಾರಿಯ ವಿದ್ಯಾನಗರದ “ರಾಗಾಸ್ ಪೋರ್ಟ್ ಅಪಾರ್ಟ್ ಮೆಂಟ್’ನ ಎರಡು ಫ್ಲ್ಯಾಟ್‌ಗಳಲ್ಲೂ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಹರಿ ಇಸ್ಪಾತ್ ಕಾರ್ಖಾನೆಯಲ್ಲಿ ಸಚಿವ ಶ್ರೀರಾಮುಲು ಹಾಗೂ ಇತರರ ಪಾಲುದಾರಿಕೆಯೂ ಇದ್ದು, ಶ್ರೀರಾಮು, ಮಾಜಿ ಶಾಸಕ ಸುರೇಶ್ ಬಾಬು, ಲಾಡ್ ಕುಟುಂಬದ ಪ್ಲಾಂಟ್‌ಗಳನ್ನು ಪಾಲುದಾರ ಕೈಲಾಸ್ ವ್ಯಾಸ್ ಅವರು ಬಾಡಿಗೆ ಹಾಗೂ ಲೀಜ್ ಮೇಲೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಮನೆ ಮೆಟ್ಟಿಲುಗಳಿಂದ ಬಿದ್ದು ಬಿಜೆಪಿ ಹಿರಿಯ ನಾಯಕ ಸುಂದರ್ ಲಾಲ್ ದೀಕ್ಷಿತ್ ಸಾವು
https://pragati.taskdun.com/senior-bjp-leader-sundar-lal-dixit-died-after-falling-down-the-stairs-of-his-house/