Kannada NewsLatest

ಕಲಾಬಿಂಬ ವಸ್ತು ಪ್ರದರ್ಶನ ಯಶಸ್ವಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಸಂಸ್ಥೆಗಳು ದೇಶಪಾಂಡೆ ಸ್ಟಾರ್ಟ್ ಅಪ್ ಸಹಯೋಗದೊಂದಿಗೆ ಗೋವಾವೇಸದಲ್ಲಿರುವ ಮಹಾವೀರ ಭವನದಲ್ಲಿ ಕಲಾಬಿಂಬ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಈ ವಸ್ತು ಪ್ರದರ್ಶನ 15 ಮತ್ತು 16 ಎರಡು ದಿನಗಳ ಕಾಲ ಯಶಸ್ವಿಯಾಗಿ ನೆರವೇರಿತು ಸುಮಾರು 40 ಮಾರಾಟ ಮಳಿಗೆಗಳು ಹಾಗೂ 10 ಉಪಹಾರ ಮಳಿಗೆಗಳು ಬಂದಿದ್ದವು
ಈ ಕಲಾಬಿಂಬ ವಸ್ತು ಪ್ರದರ್ಶನದಿಂದ ಬಂದ ಹಣವನ್ನು ತಿಲಕವಾಡಿಯ ಮಂಡೋಳಿ ರಸ್ತೆಯ ಶಾಂತಿನಗರದ ಆಶ್ರಮದಲ್ಲಿ ಕಲಿಯುತ್ತಿರುವ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡಲಾಗುವುದು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಸಮಾಜ ಸೇವಕಿ ತುಳಸಾ ಪಾಟೀಲ ಮಾತನಾಡಿ ಮಂಡಳವು ಮಾಡಿರುತ್ತಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ಶ್ಲಾಘನೆಯನ್ನು ಮಾಡಿದರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮತ್ತು ಹಲವಾರು ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನು ಪಡೆದು ಈ ಕಾರ್ಯಕ್ರಮದಲ್ಲಿ ಸನ್ಮಾನಗೊಂಡ ಶೀತಲ ಚಿಲಮಿ ಅವರು ಮಾತನಾಡಿ ನಾವೆಲ್ಲ ಹೆಣ್ಣು ಮಕ್ಕಳು ಯಾರಿಗೆ ಏನು ಕಡಿಮೆ ಇಲ್ಲ ಮನೆಯನ್ನು ನಡೆಸಿಕೊಂಡು ಹೊರಗೂ ಕೂಡ ದುಡಿಯುತ್ತಿದ್ದೇವೆ. ಯಾರಲ್ಲಿ ಯಾವ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ನಾವು ಅಳವಡಿಸಿಕೊಳ್ಳಬೇಕು ಮತ್ತು ಎಲ್ಲಿ ಅವಶ್ಯಕತೆ ಇರುತ್ತದೆಯೋ ಅದನ್ನು ಗುರುತಿಸಿ ಅವರಿಗೆ ನಮ್ಮ ಸಹಾಯ ಮುಟ್ಟುವಂತೆ ಮಾಡಬೇಕೆಂದರು ಮುಖ್ಯ ಅತಿಥಿಗಳಾದ ಶೋಭಾ ದೊಡ್ಡಣ್ಣವರ ಅವರು ಮಾತನಾಡಿ ಎಷ್ಟೊಂದು ಒಗ್ಗಟ್ಟನಿಂದ ಕೆಲಸ ಮಾಡುತ್ತಿರುವ ಕ್ರಾಂತಿ ಮಹಿಳಾ ಮಂಡಳದ ಕಾರ್ಯವೈಖರಿಯನ್ನು ಮೆಚ್ಚಿ ಸ್ಟಾರ್ ಹೋಲ್ಡರ್ ಗಳಿಗೆ ಶುಭ ಕೋರಿದರು.

ವೇದಿಕೆಯ ಮೇಲೆ ಡಾ. ರಾಜೇಂದ್ರ ಮಠದ ವೀರಯ್ಯ ಹಿರೇಮಠ ಆಶಾ ನಿಲಜಿಗಿ ಉಪಸ್ಥಿತರಿದ್ದರು ಅಧ್ಯಕ್ಷರಾದ ಮಂಗಲ ಮಠದವರು ಸ್ವಾಗತಿಸಿದರು ಕಾರ್ಯದರ್ಶಿಗಳಾದ ರತ್ನಶ್ರೀ ಗುಡೇರ ಪ್ರಾತ್ಸಾವಿಕವಾಗಿ ಮಾತನಾಡಿದರು ಪ್ರೇಮಾ ಉಪಾಧ್ಯಾಯ ಅವರ ಸ್ವಾಗತ ನೃತ್ಯದೊಂದಿಗೆ ಹಾಗೂ ಸುಕನ್ಯಾ ಸೂಜಿ ಪುಷ್ಪಾ ನಿಲಜಿಗಿ ಮನಿಷಾ ಮಜಲಿ ಗೀತಾ ಎಮ್ಮಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು ಅತಿಥಿ ಪರಿಚಯವನ್ನು ಮಮತಾ ಅಂಟಿನ್ ರೇಣುಕಾ ಕಾಂಬಳೆ ಭಾರತಿ ರತ್ನಪ್ಗೊಳ ಹೇಮಾ ಭರಬರಿ ಶೋಭಾ ಕಾಡನ್ನವರ ಹಾಗೂ ಭಾರತಿ ಕೆರೂರ ಮಾಡಿದರು ತ್ರಿಶೀಲಾ ಪಾಯಪ್ಪನವರ್ ಮತ್ತು ಅಕ್ಷತಾ ಪಾಟೀಲ್ ನಿರೂಪಣೆ ಮಾಡಿದರು ವಂದನಾರ್ಪಣೆಯನ್ನ ದೀಪ್ತಿ ಕಾಗವಾಡ ಮಾಡಿದರು ಕಲಾಬಿಂಬ ಕಾರ್ಯಕ್ರಮದಲ್ಲಿ ಸಂಜೆ ಮಕ್ಕಳಿಗಾಗಿ ಡ್ರಾಯಿಂಗ್ ಕಾಂಪಿಟೇಶನ್ ಅನ್ನು ಏರ್ಪಡಿಸಲಾಗಿತ್ತು ಈ ಡ್ರಾಯಿಂಗ್ ಸ್ಪರ್ಧೆಯ ಜವಾಬ್ದಾರಿಯನ್ನು ಅಶ್ವಿನಿ ನವಲೆ ಅವರು ತೆಗೆದುಕೊಂಡಿದ್ದರು ಸುಮಾರು 70 ಮಕ್ಕಳು ಸುಂದರವಾದ ಚಿತ್ರವನ್ನು ಬಿಡಿಸುವುದರ ಮೂಲಕ ತಮ್ಮ ಕುಶಲತೆಯನ್ನು ಮೆರೆದರು.

https://pragati.taskdun.com/b-s-yedyurappareactionjagadish-shettar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button