
ಪ್ರಗತಿವಾಹಿನಿ ಸುದ್ದಿ: ಹಲವು ವರ್ಷಗಳ ಹಿಂದೆ ತನ್ನ ತಂದೆಯನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ಮಗ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
17 ವರ್ಷಗಳ ಹಿಂದೆ ನಡೆದಿದ್ದ ತಂದೆಯ ಕೊಲೆಗೆ ಮಗ ಸೇಡು ತೀರಿಸಿಕೊಳ್ಳುವ ಮೂಲಕ ಶಿವರಾಯ ಮಾಲಿ ಪಾಟೀಲ್ ಎಂಬಾತನನ್ನು ತಲ್ವಾರ್ ನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ನಡೆದಿದೆ.
ಜಮೀನಿನ ಕೆಲಸ ಮುಗಿ ವಾಪಾಸ್ ಆಗುತ್ತಿದ್ದ ಶಿವರಾಯ ಪಾಟೀಲ್ ಎಂಬಾತನನ್ನು ಲಕ್ಷ್ಮೀ ಕಾಂತ್ ಎಂಬಾತ ಬರ್ಬರವಾಗಿ ಕೊಲೆಗೈದಿದ್ದಾನೆ. 2008ರಲ್ಲಿ ಲಕ್ಷ್ಮೀ ಕಾಂತ್ ತಂದೆ ನಾಗೇಂದ್ರಪ್ಪನನ್ನು ಶಿವರಾಯ ಪಾಟೀಲ್ ಕೊಲೆ ಮಾಡಿದ್ದ. ನಾಗೇಂದ್ರಪ್ಪನ ಅಣ್ಣ ಪತ್ನಿ ಜೊತೆ ಶಿವರಾಯ ಪಾಟೀಲ್ ಅಕ್ರಮ ಸಂಬಂಧಹೊಂದಿದ್ದ. ಈ ವಿಚಾರವಾಗಿ ನಾಗೇಂದ್ರಪ್ಪನನ್ನು ಕೊಲೆ ಮಾಡಿದ್ದ. ಇದೀಗ ತನ್ನ ತಂದೆ ನಾಗೇಂದ್ರಪ್ಪನನ್ನು ಕೊಲೆ ಮಾಡಿದ್ದಕ್ಕೆ 17 ವರ್ಷಗಳ ಬಳಿಕ ಲಕ್ಷ್ಮೀ ಕಾಂತ್ ಶಿವರಾಯ ಪಾಟೀಲ್ ನನ್ನು ಕೊಲೆಗೈದಿದ್ದಾನೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.