ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಮುಂದುವರೆದಿದೆ. ಒಂದೆಡೆ ಭೀಮಾ ನದಿಯ ಅಟ್ಟಹಾಸ, ಇನ್ನೊಮ್ದೆಡೆ ಕಾಗಿನಾ ನದಿ ರುದ್ರನರ್ತನದಿಂದ ನಲುಗಿಹೋಗಿರುವ ಜಿಲ್ಲೆಯ ಜನ ಮನೆ ಮಠ ಕಳೆದುಕೊಂಡು, ಅನ್ನ ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ಈ ನಡುವೆ ಪ್ರವಾಹಕ್ಕೆ ಸಿಲುಕಿದ್ದ 225 ಜನರನ್ನು ರಕ್ಷಿಸಲಾಗಿದೆ.
ಭೀಮಾ ನಡಿಯಲ್ಲಿ ನೀರು ಅಪಾಯದಮಟ್ಟ ಮೀರಿ ಹರಿದ ಪರಿಣಾಮ ಅಫಜಲಪುರ ತಾಲೂಕಿನ ಉಡಚಣ ಗ್ರಾಮ ಸಂಪೂರ್ಣ ಜಲಾವೃತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ್ದ 225 ಜನರನ್ನು ರಕ್ಷಿಸಲಾಗಿದೆ.
ಎಸ್ ಡಿ ಆರ್ ಎಫ್ ನ ಮೂರು ತಂಡದಿಂದ ಜಿಲ್ಲೆಯ ಜನರನ್ನು ರಕ್ಷಿಸಲಾಗಿದ್ದು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುತಗಾ ಗ್ರಾಮ ಸಂಪೂರ್ಣ ಜಲ ಪ್ರಳಯಕ್ಕೆ ತುತ್ತಾಗಿದೆ. ಗ್ರಾಮದ ಸುಮಾರು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಸೋನ್ನ ಬ್ಯಾರೇಜ್ ನಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಭೀಮಾ ನದಿಯಿಂದ ಸುಮಾರು 300 ಅಡಿ ಎತ್ತರದಲ್ಲಿರುವ ಗಾಣಗಾಪುರ ಸಂಗಮ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ