ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಜಿಲ್ಲೆಯಲ್ಲಿ ಆಗಸ್ಟ್ 10 ರಿಂದ 15 ರವರೆಗೆ ಸಂಭವಿಸಿದ ಅತೀ ಮಳೆಯಿಂದ 1822 ಮನೆಗಳು ಹಾನಿಗೊಳಗಾಗಿದ್ದು, ಜಮಖಂಡಿಯಲ್ಲಿ ಒಂದು ಹಸು ಮೃತಪಟ್ಟಿದೆ. ಬೆಳೆ ಹಾನಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.
ಆಗಸ್ಟ್ 2020 ರಿಂದ ಸೆಪ್ಟೆಂಬರ್ 9 ರ ಅವಧಿಯಲ್ಲಿ ಸಂಭವಿಸಿದ ಮಳೆ, ಭೀಕರ ಪ್ರವಾಹದಿಂದ 31 ಗ್ರಾಮಗಳು ಬಾದಿತಗೊಂಡಿವೆ. ಒಟ್ಟು 270 ಕುಟುಂಬಗಳು ಭಾದಿತಗೊಂಡಿವೆ. 4 ಕಾಳಜಿ ಕೇಂದ್ರಗಳನ್ನು ತೆರೆದು 210 ಜನವರಿಗೆ ಊಟ, ಉಪಹಾರ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಬಾದಿತವಾದ 270 ಕುಟುಂಬಗಳಿಗೆ ತಲಾ 10ಸಾವಿರ ರೂ. ತುರ್ತು ಪರಿಹಾರವನ್ನು ಪಾವತಿಸಲಾಗಿದೆ. ಮುಧೋಳ್ ತಾಲೂಕಿನಲ್ಲಿ ಒಂದು ಜಾನುವಾರು ಮೃತಪಟ್ಟಿದ್ದು, 30 ಸಾವಿರ ರೂ. ಪರಿಹಾರ ಪಾವತಿಸಲಾಗಿದೆ.
34869 ಹೆಕ್ಟರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. 105 ಮನೆಗಳು ಪೂರ್ಣ ಪ್ರಮಾಣದಲ್ಲಿ 26 ಮನೆಗಳು ತೀವ್ರ ಹಾಗೂ 338 ಮನೆಗಳು ಭಾಗಶ: ಹಾನಿಗೊಳಗಾಗಿವೆ. ಮನೆ ಹಾನಿ ಕುರಿತು ಜಂಟಿ ಸಮೀಕ್ಷೆ ಮುಗಿದ 347 ಮನೆ ಹಾನಿ ಬಗ್ಗೆ ಆರ್ ಜಿಹೆಚ್ ಸಿಎಲ್ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. 23 ಕೈಮಗ್ಗಳು ಹಾನಿಗೊಳಗಾಗಿವೆ. ಗ್ರಾಮೀಣಾಭಿವೃದ್ಧಿ ಇಲಾಖೆಯ 999 ಕಿ.ಮೀ ರಸ್ತೆ, 19 ಕುಡಿಯುವ ನೀರಿನ ಯೋಜನೆಗಳು ಹಾಗೂ 32 ಸೇತುವೆ ಮತ್ತು ಬಾಂದರುಗಳು ಹಾನಿಯಾಗಿವೆ. ಲೋಕೋಪೊಯೋಗಿ ಇಲಾಖೆ ವ್ಯಾಪ್ತಿಯ 94 ಕಿ.ಮೀ. ರಾಜ್ಯ ಹೆದ್ದಾರಿ, 308 ಕಿ.ಮೀ. ಜಿಲ್ಲಾ ಮುಖ್ಯರಸ್ತೆಗಳು ಹಾಗೂ 54 ಸೇತುವೆಗಳು ಹಾನಿಯಾಗಿವೆ. 43 ಕೆನಾಲ್, 28 ಕೆರೆಗಳು, 15 ಏತನೀರಾವರಿ ಯೋಜನೆಗಳು ಹಾನಿಯಾಗಿವೆ. 1851 ಕಂಬಗಳು, 471 ಟಿ.ಸಿ.ಗಳು 69 ಕಿ.ಮೀ. ವಿದ್ಯುತ್ ಲೈನ್‍ಗಳು ಹಾನಿಯಾಗಿರುತ್ತವೆ. ಒಟ್ಟು 857 ಕೋಟಿ ರೂ. ನಷ್ಟವಾಗಿದೆ ಎಂದು ಪ್ರಾಥಮಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾನವ ಹಾನಿ, ಜಾನುವಾರುಗಳ ಹಾನಿ, ಮನೆ ಹಾನಿ, ಬೆಳೆ ಹಾನಿ, ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ಕುರಿತು ತ್ವರಿತವಾಗಿ ಸಮೀಕ್ಷೆ ನಡೆಸಿ, ಕೂಡಲೇ ಪರಿಹಾರ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಸಂತ್ರಸ್ತರು ಆತಂಕಕ್ಕೆ ಒಳಗಾದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಸಮನ್ವಯತೆಯಿಂದ ಮುಂಜಾಗ್ರತಾ ಕ್ರಮಗಳು ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿರುವುದಾಗಿ ಡಿಸಿಎಂ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ