ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ಅಪರಾಧ ಪ್ರಕರಣದ ನಿಯಮ ಪಾಲಿಸದೇ ಕರ್ತವ್ಯ ಲೋಪವೆಸಗಿದ ಠಾಣಾಧಿಕಾರಿಗೆ ಕೋರ್ಟ್ ಒಂದುವಾರ ಕಾಲ ರಸ್ತೆ ಕಸ ಗುಡಿಸುವ ಶಿಕ್ಷೆ ವಿಧಿಸಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಮಹಿಳೆಯೊಬ್ಬರು ತನ್ನ ಮಗ ಕಾಣೆಯಾಗಿದ್ದಾನೆ ಎಂದು ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಈ ವೇಳೆ ದೂರು ಸ್ವೀಕರಿಸಿದ ಠಾಣಾಧಿಕಾರಿ ಎಫ್ ಐಆರ್ ದಾಖಲಿಸದೇ ನಿರ್ಲಕ್ಷ್ಯ ತೋರಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ಕಲಬುರ್ಗಿ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಆಲಿಸಿದ ನ್ಯಾಯಪೀಠ, ಠಾಣಾಧಿಕಾರಿ ನಿರ್ಲಕ್ಷ್ಯ, ಕರ್ತವ್ಯ ಲೋಪಕ್ಕೆ ಠಾಣೆಯ ಮುಂದೆ ಒಂದುವಾರ ರಸ್ತೆ ಕಸ ಸ್ವಚ್ಚಗೊಳಿಸುವಂತೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಮಹಿಳೆ ದೂರು ನೀಡಿದರೂ, ಠಾಣಾಧಿಕಾರಿ ನೋಂದಣಿ ಬುಕ್ ನಲ್ಲಿ ನೋಂದಾಯಿಸಿಲ್ಲ, ಗಂಭೀರ ಪ್ರಕರಣವಾಗಿದ್ದರೂ ಎಫ್ ಐ ಆರ್ ದಾಖಲಿಸದೇ ನಿರ್ಲಕ್ಷ ತೋರಿದ್ದಾರೆ. ಪೊಲೀಸ್ ಅಧಿಕಾರಿ ಅಪರಾಧ ಪ್ರಕರಣದ ನಿಯಮ ಪಾಲಿಸಿಲ್ಲ. ಅಲ್ಲದೇ ವ್ಯಕ್ತಿಯ ರಕ್ಷಣೆಗೂ ಮುಂದಾಗಿಲ್ಲ ಹೀಗಾಗಿ ಅಧಿಕಾರಿಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ