Kannada NewsKarnataka NewsLatest

*ಕಲಬುರ್ಗಿ ವಕೀಲನ ಹತ್ಯೆ ಪ್ರಕರಣ; ಸುಪಾರಿ ಕೊಟ್ಟಿದ್ದ ದಂಪತಿ ಬಂಧನ*

ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ಹಾಡಹಗಲೇ ಕಲಬುರ್ಗಿಯಲ್ಲಿ ವಕೀಲನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಲಬುರ್ಗಾ ವಿವಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿ.7ರಂದು ವಕೀಲ ಈರಣ್ಣಗೌಡ ಪೊಲೀಸ್ ಪಾಟೀಲ್ ಎಂಬುವವರನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಬಂದು ಅಪಾರ್ಟ್ ಮೆಂಟ್ ಪಾರ್ಕಿಂಗ್ ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಹಲವು ಬಾರಿ ಕೊಚ್ಚಿ ಕೊಲೆಗೈದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಕೀಲನ ಹತ್ಯೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ‌ ಠಾಣೆ ‌ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಉದನೂರು ಗ್ರಾಮದ ಮಲ್ಲಿನಾಥ ಬಸಣ್ಣ‌ (45), ಭಾಗಣ್ಣ ಅಲಿಯಾಸ್ ಭಗವಾನ್ (20), ಅವ್ವಣಪ್ಪ ಭಾಗವಂತರಾವ್ (48) ಎಂಬುವವರನ್ನು ಬಂಧಿಸಿದ್ದರು. ಇದೀಗ ಕೊಲೆಗೆ ಸುಪಾರಿ ಕೊಟ್ಟಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

Home add -Advt

ನೀಲಕಂಠ ಹಾಗೂ ಪತ್ನಿ ಸಿದ್ದಮ್ಮ ಅವರನ್ನು ಪೊಲಿಸರು ಬಂಧಿಸಿದ್ದು, ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ವಕೀಲನ ಕೊಲೆಗೆ ಗಂಡ-ಹೆಂಡತಿ ಪ್ಲಾನ್ ಮಾಡಿ ಸುಪಾರಿ ಕೊಟ್ಟಿದ್ದರು. ಹತ್ಯೆ ದಿನ ದಂಪತಿ ಕಾರು ಪೂಜೆಗೆಂದು ಗಾಣಗಾಪುರ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದಲ್ಲಿದ್ದಾಗಲೇ ವಕೀಲನ ಕೊಲೆ ಸುದ್ದಿ ತಿಳಿದಿತ್ತು.

ಮನೆಗೆ ಬಂದವರು ವಕೀಲನ ಕೊಲೆ ಮಾಡಿದ್ದ ಆರೋಪಿಗಳಿಗೆ ಹಣ ನೀಡಿದ್ದರು ಎಂದು ತಿಳಿದುಬಂದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button