ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ಲಿಂಗೈಕ್ಯ

ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ನಿರಾಹಾರಿ ಎಂದೇ ಚಿರಪರಿಚಿತರಾದ ಸೇಡಂ ತಾಲೂಕು ಕ್ಷೇತ್ರ ಯಾನಾಗುಂದಿಯ ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ಅಮ್ಮನವರು (86) ಲಿಂಗೈಕ್ಯರಾಗಿದ್ದಾರೆ. ಸೋಮವಾರ ಸೂರ್ಯೋದಯದ ವೇಳೆಗೆ ಅಂತ್ಯಕ್ರಿಯೆ ಜರುಗಲಿದೆ ಎಂದು ಮಾತಾ ಮಾಣಿಕೇಶ್ವರಿ ಟ್ರಸ್ಟ್‌ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ, ಶ್ರೀಶೈಲಂ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಶಾಖಾ ಆಶ್ರಮಗಳಿದ್ದು, ಕೋಟ್ಯಂತರ ಭಕ್ತರನ್ನು ಹೊಂದಿರುವ ಮಾತಾಜಿ ಅಗಲಿಕೆಯಿಂದ ಭಕ್ತರು ದು:ಖಿತರಾಗಿದ್ದಾರೆ.

ಕಲಬುರಗಿ ಜಿಲ್ಲೆಯ ಯಾನಾಗುಂದಿಯಲ್ಲಿ ಅಮ್ಮನವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅನ್ನ ನೀರು ಇಲ್ಲದೇ ನಿರಾಹಾರಿಯಾಗಿದ್ದ ಮಾತಾಜಿ, ವರ್ಷಾನುಗಟ್ಟಲೇ ತಪಸ್ಸಿನಲ್ಲಿ ಕೂಡುತ್ತಿದ್ದರು. ಅಹಿಂಸೆ, ಕೋಟಿ ಲಿಂಗ ಸ್ಥಾಪನೆ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದರು.

ಮಾತಾ ಮಾಣಿಕೇಶ್ವರಿ ಅವರ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ನಡೆದಿದ್ದು, ಆಶ್ರಮಕ್ಕೆ ಭಕ್ತರ ದಂಡೇ ಆಗಮಿಸುತ್ತಿದೆ. ಅವರೇ ನಿರ್ಮಿಸಿಕೊಂಡಿರುವ ಸಮಾಧಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮಾಣಿಕೇಶ್ವರಿ ಮಾತಾಜಿಯವರು 1943ರ ಜುಲೈ 27ರಂದು ಜನಿಸಿದ್ದು, ಸೇಡಂ ತಾಲೂಕಿನ ಮಲ್ಲಾಬಾದ ಗ್ರಾಮದ ಬಸಮ್ಮ ಬುಗ್ಗಪ್ಪ ದಂಪತಿಯ ಮಗಳು. ಬಾಲ್ಯದಲ್ಲಿಯೇ ಆಧ್ಯಾತ್ಮದತ್ತ ಸಾಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button