Latest

ಮತ್ತೊಂದು ಅಕ್ರಮ ಬಯಲು; ಹೂಕುಂಡದಲ್ಲಿ ಬ್ಲೂಟೂತ್ ಇಟ್ಟು ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮದ ಬೆನ್ನಲ್ಲೇ ಕಲಬುರ್ಗಿಯಲ್ಲಿ ಮತ್ತೊಂದು ಪರೀಕ್ಷಾ ಅಕ್ರಮ ಬೆಳಕಿಗೆ ಬಂದಿದ್ದು, ಬ್ಲೂಟೂತ್ ಬಳಕಿಸಿ ಪರೀಕ್ಷೆಯಲ್ಲಿ ಅಭ್ಯರ್ಥಿ ಪಾಸ್ ಆಗಿರುವ ಘಟನೆ ನಡೆದಿದೆ.

ಕಲಬುರ್ಗಿಯ ಎಂಎಸ್ ಐ ಪರೀಕ್ಷೆ ಕೇಂದ್ರದಲ್ಲಿ ಈ ಅಕ್ರಮ ನಡೆದಿದ್ದು, ಪರೀಕ್ಷೆ ಬರೆದ 8 ಅಭ್ಯರ್ಥಿಗಳು ಪಾಸ್ ಆಗಿದ್ದು, ಓರ್ವ ಅಭ್ಯರ್ಥಿ ಪ್ರಭು ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ್ದಾನಲ್ಲದೇ ಆತನೂ ಕೂಡ ಪಾಸ್ ಆಗಿದ್ದಾನೆ.

Related Articles

ಅಭ್ಯರ್ಥಿ ಪ್ರಭುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಪರೀಕ್ಷಾ ಕೇಂದ್ರದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಈ ವೇಳೆ ಪೊಲೀಸರೇ ಶಾಕ್ ಆಗಿದ್ದು, ಪರೀಕ್ಷಾ ಕೊಠಡಿಯ ಹೂವಿನ ಕುಂಡದಲ್ಲಿ ಬ್ಲೂಟೂತ್ ಅಳವಡಿಸಿರುವುದು ಪತ್ತೆಯಾಗಿದೆ.

ಪರೀಕ್ಷೆ ನಡೆಯುವ ಮೊದಲೇ ಬ್ಲೂಟೂತ್ ಇಟ್ಟು, ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಅಭ್ಯರ್ಥಿ ಪಾಸ್ ಆಗಿದ್ದಾಗಿ ತಿಳಿದುಬಂದಿದೆ.

ಸಿಎಂ ಬದಲಾವಣೆ ಚರ್ಚೆ; ಸ್ಪಷ್ಟನೆ ನೀಡಿದ ಅರುಣ್ ಸಿಂಗ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button