Latest

ಮದುವೆಗೆ ವಾರವಿರುವಾಗ ರೈಲ್ವೆ ಟ್ರ್ಯಾಕ್ ಮೇಲೆ ರುಂಡ-ಮುಂಡ ಬೇರ್ಪಟ್ಟ ಪೊಲೀಸ್ ಪೇದೆಯ ಶವ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಮದುವೆಗೆ ಭರ್ಜರಿ ಸಿದ್ಧತೆ ನಡೆಸಿದ್ದ ಪೊಲೀಸ್ ಪೇದೆ ಹಸೆಮಣೆಯೇರಲು ಒಂದು ವಾರ ಇರುವಾಗ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಕಲಬುರ್ಗಿ ಜಿಲ್ಲೆಯ ಸಾವಳಗಿ ರೈಲ್ವೆ ಟ್ರ್ಯಾಕ್ ಮೇಲೆ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪೊಲೀಸ್ ಪೇದೆಯೊಬ್ಬರ ಶವ ಪತ್ತೆಯಾಗಿದೆ. ಮದರಾ ಗ್ರಾಮದ 25 ವರ್ಷದ ಶ್ರೀನಾಥ್ ಮೃತ ಪೊಲೀಸ್.

Home add -Advt

ಶ್ರೀನಾಥ್ ಕಲಬುರ್ಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಮದುವೆಗೆ ಒಂದು ವಾರ ಬಾಕಿ ಇತ್ತು. ಆದರೆ ಇದೀಗ ಶ್ರೀನಾಥ್ ಶವ ಸಾವಳಗಿ ಬಳಿ ರೈಲ್ವೆ ಟ್ರ್ಯಾಕ್ ಮೇಲೆ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮಹಿಳೆ ಪ್ರಜ್ಞೆ ತಪ್ಪಿಸಿ ಪಾದ್ರಿಯಿಂದ ಅತ್ಯಾಚಾರ

Related Articles

Back to top button