Latest

*ಕಲ್ಯಾಣ ಮಂಟಪದಲ್ಲಿ ದುರಂತ: ಕರೆಂಟ್ ಶಾಕ್ ಹೊಡೆದು ನಾಲ್ಕುವರ್ಷದ ಮಗು ಸಾವು*

ಪ್ರಗತಿವಾಹಿನಿ ಸುದ್ದಿ: ಏರ್ ಕೂಲರ್ ನಿಂದ ವಿದ್ಯುತ್ ಪ್ರವಹಿಸಿ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಲ್ಯಾಣಮಂಟಪದಲ್ಲಿ ನಡೆದಿದೆ.

ಬಸವೇಶ್ವರ ನಗರದ ಕಲ್ಯಾಣ ಮಂಟಪವೊಂದರಲ್ಲಿ ಈ ದುರಂತ ಸಂಭವಿಸಿದೆ. ನಾಲ್ಕು ವರ್ಷದ ಶಿವಂ ಮೃತ ಬಾಲಕ. ಅಭಿಮಾನಿ ಕನ್ವೆನ್ ಶನ್ ಹಾಲ್ ನಲ್ಲಿ ಈ ಘಟನೆ ನಡೆದಿದೆ.

ಶಿವಂ ಕೆಂಪೇಗೌಡ ನಗರದ ನಿವಾಸಿ ಪ್ರದೀಪ್ ಹಾಗೂ ದೀಪಾ ದಂಪತಿ ಪುತ್ರ. ಸಂಬಂಧಿಕರ ಮದುವೆಗೆಂದು ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ತಾಯಿ ದೀಪಾಗೂ ಕರೆಂಟ್ ಶಾಕ್ ಹೊಡೆದು ಗಾಯಗೊಂಡಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪ ಮಾಲೀಕ ದಿವಾಕರ್, ಮ್ಯಾನೇಜರ್ ಸಂತೋಷ, ಎಲೆಕ್ಟ್ರಿಷಿಯನ್ ಸತೀಶ್ ವಿರುದ್ಧ ದೂರು ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button