ವಡ್ಡರ ಛಾವಣಿಗೆ ಕನ್ಹೇರಿ ಶ್ರೀಗಳ ಭೇಟಿ; ದಲಿತ ಕುಟುಂಬಕ್ಕೆ ಧೈರ್ಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಡ್ಡರ ಛಾವಣಿಯಲ್ಲಿ ಹಲ್ಲೆಗೊಳಗಾದ ದಲಿತ ಕುಟಂಬದ ಮನೆಗೆ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯವರು ಮತ್ತು ಹರ್ಷಾನಂದ ಸ್ವಾಮೀಜಿಯವರು ಶುಕ್ರವಾರ ರಾತ್ರಿ ಭೇಟಿ ನೀಡಿ, ದಲಿತರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ ಅವರಿಗೆ ಧೈರ್ಯ ತುಂಬಿದರು.
ಕಿಸನ್ ಕದಮ್ ಲೋಂಡೆ ಮತ್ತು ಕ್ರಿಸನ್ ಚೌಗಲೆ ಎರಡೂ ಜನ ದಲಿತ ಯುವಕರ ಮೇಲೆ ಹಲ್ಲೆ ನಡೆಸಲಾಗಿತ್ತು. ಒಂದು ವರ್ಷದ ಹಿಂದೆ ಕ್ರಿಸನ್ ಚೌಗಲೆಗೆ ತಲೆಗೆ ಏಟು ಮತ್ತು ಒಂದು ತಿಂಗಳ ಹಿಂದೆ ಕಿಸನ್ ಲೊಂಡೆಗೆ ಚಾಕು ಇರಿತವಾಗಿತ್ತೆನ್ನಲಾಗಿದೆ. ಎರಡೂ ಸಲ 15, 20 ಗೂಂಡಾಗಳಿಂದ ಮಾರಣಾಂತಿಕ ಹಲ್ಲೆ ನಡೆದಿತ್ತು . ತೊಂದರೆಗೊಳಗಾದ ವ್ಯಕ್ತಿಗಳನ್ನು ಭೇಟಿ ಮಾಡಿ, ಅಪರಾಧಿ ಗೂಂಡಾಗಳನ್ನ ಬಂಧಿಸಿ ಕೇಸ್ ಹಾಕಬೇಕು ಎಂದು ಒತ್ತಾಯಿಸಲಾಯಿತು.
ದಲಿತರಿಗೆ ಆಗುವ ಅನ್ಯಾಯ ತಡೆಯಬೇಕು, ಇಲ್ಲ ಅಂದರೆ ನಾವು ಸಂತರು ಅವರ ಬೆನ್ನ ಹಿಂದೆ ಇದ್ದೇವೆ, ನಾವೇ ಬೀದಿಗೆ ಬರಬೇಕಾದೀತು ಎಂದು ಕನ್ಹೇರಿ ಸ್ವಾಮೀಜಿಯವರು ಎಚ್ಚರಿಕೆ ನೀಡಿದರು.
ವಡ್ಡರ ಛಾವಣಿಯ ದಲಿತ ಯುವಕರು ಈರ್ವ ಸ್ವಾಮಿಜೀಯವರನ್ನು ಹೂವಿನ ಸುರಿಮಳೆಗೈದು ಸ್ವಾಗತಿಸಿದರು. ಮಹಿಳೆಯರು ಆರತಿ ಮಾಡಿ ಮನೆಗೆ ಬರಮಾಡಿಕೊಂಡರು. ಮೀರಾಬಾಯಿ ಲೋಂಡೆ, ಲತಾ ಲೋಂಡೆ, ಚಂದ್ರಕಲಾ ಲೋಂಡೆ, ಗೌತಮ ಲೋಂಡೆ, ಹನುಮಂತ ವಡ್ಡರ, ಅಪ್ಪಾರಾಮರಾವ್, ಸುನೀಲ ಗೌರಣ್ಣ, ರೋಹಿತ ರನಸುಭೆ , ಕೃಷ್ಣ ಭಟ್ , ವಡ್ಡರ ಛಾವಣಿಯ ಮಹಿಳೆಯರು, ಯುವಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ