Belagavi NewsBelgaum NewsKannada NewsKarnataka NewsPolitics

*ನಾಳೆ ಬೆಳಗಾವಿಯಲ್ಲಿ ಕನ್ನಡ ದೀಕ್ಷೆ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಳೆ ರವಿವಾರ ಕನ್ನಡ ದೀಕ್ಷೆ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದೆ. ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಸುರೇಶ್ ಗವನ್ನವರ ತಿಳಿಸಿದರು.  

ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ದೀಕ್ಷೆ ನೀಡಿ ಸ್ವಯಂ ಸೇವಕರನ್ನು ತಯಾರಿಸಲಾಗುತ್ತಿದೆ. ನೆಲ, ಜಲ ವಿಷಯದಲ್ಲಿ, ನಾಡಿನಲ್ಲಿ ಕನ್ನಡ ವಿಷದಲ್ಲಿ ಏನೇ ಸಮಸ್ಯೆಗಳು ಆದರು ಸ್ವಯಂ ಸೇವಕರು ಮುಂದೆ ಬಂದು ಕೆಲಸ ಮಾಡುತ್ತಾರೆ. ರಾಜ್ಯದ ಜಿಲ್ಲೆ ಜಿಲ್ಲೆಯಿಂದ ಸ್ವಯಂ ಸೇವಕರನ್ನು ತಯಾರು ಮಾಡುತ್ತಿದ್ದೇವೆ. ಕನ್ನಡದ ಮೇಲೆ ಆಗುತ್ತಿರುವ ಅನ್ಯಾಯವನ್ನು  ಹೋಗಲಾಡಿಸಲು ನಾರಾಯಣ ಟಿಎ ಗೌಡರು ದೀಕ್ಷೆ ಭೋದಿಸಲಿದ್ದಾರೆ‌. ಕರ್ನಾಟಕದಲ್ಲಿ ಕನ್ನಡವೇ ಸೌರ್ಭೌಮ ಎಂದು ಜಿಲ್ಲೆಯ ಸ್ವಾಭಿಮಾನಿ ಕನ್ನಡಿಗರು ಕಾರ್ತಕ್ರಮದಲ್ಲಿ ಭಾಗಿ ಆಗಬೇಕು. ಕರ್ನಾಟಕ ರಕ್ಷಣಾ ವೇದಿಕೆಗೆ ಸೇರಬೇಕು ಎಂದು ಕರೆ ನೀಡಿದರು. 

ಬಳಿಕ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಗೌಡ ಅವರ ಆದೇಶದಂತೆ ಕನ್ನಡ ದೀಕ್ಷೆ ಕಾರ್ಯಕ್ರಮ ಆಗುತ್ತಿದೆ.  ಪ್ರತಿ ಸಭೆ ಸಮಾರಂಭ, ಪ್ರತಿಭಟನೆ, ಕನ್ನಡ ವಿಷಕ್ಕೆ ಕನ್ನಡ ದೀಕ್ಷೆ ಪಡೆದ ಸ್ವಯಂ ಸೇವಕರು ಮುಂದಾಗಬೇಕು.‌ ಜಿಲ್ಲೆಯಿಂದ 4000 ಸಾವಿರ ಸ್ವಯಂ ಸೇವಕರನ್ನು ಕೋಡುತ್ತಿದ್ದೇವೆ ಎಂದರು 

ಕಾರ್ಯಕ್ರಮಕ್ಕೆ ಸ್ವಾಮಿಗಳು, ಮಠಾಧೀಶರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಚಿವರು, ಶಾಸಕರು, ಸಂಸದರು. ಮಾಜಿ ಶಾಸಕರು. ಎಂಎಲ್ಸಿ ಗಳು, ಸಾಹಿತಿಗಳು, ಚಿಂತಕರು, ವಿವಿಧ ಸಮುದಾಯ ಮುಖಂಡರು ಕನ್ನಡ ದೀಕ್ಷೆ ಕಾರ್ಯಕ್ರಮದಲ್ಲಿ ಇರಲಿದ್ದಾರೆ‌ ಎಂದರು.

Home add -Advt

ಈ ಕಾರ್ಯಕಮ್ರಕ್ಕಾಗಿ ಒಂದು ತಿಂಗಳಕಾಲ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದೇವೆ. ಈ ಮುಂಚೆ ಹಾಸನದಲ್ಲಿ ಈ ರೀತಿ ಕಾರ್ಯಕ್ರಮ ಆಗಿದೆ. ಈಗ ಬೆಳಗಾವಿಯಲ್ಲಿ ಕಾರ್ಯಕ್ರಮ ಆಗುತ್ತಿದೆ. ಕಾರ್ಯಕ್ರಮದಲ್ಲಿ ಗಡಿ ವಿಷದ ಬಗ್ಗೆ ಚರ್ಚೆ ಆಗುತ್ತೆ. ಜಿಲ್ಲೆಯಲ್ಲಿ ಸಂಘಟನೆಯನ್ನು ಗಟ್ಟಿ ಮಾಡಲು ಕಾರ್ಯಕ್ರಮ ಮಾಡುತಿದ್ದೇವೆ ಎಂದು ತಿಳಿಸಿದರು.

Related Articles

Back to top button