Belagavi NewsKannada NewsKarnataka NewsLatest

*ಕನ್ನಡ ಕಡ್ಡಾಯ ಸುಗ್ರೀವಾಜ್ಞೆ ವಾಪಾಸ್ ಕಳುಹಿಸಿದ ರಾಜ್ಯಪಾಲರು; ಹೋರಾಟದ ಎಚ್ಚರಿಕೆ ನೀಡಿದ ಕನ್ನಡ ಪರ ಸಂಘಟನೆ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಫೆಬ್ರುವರಿ 28ರೊಳಗಾಗಿ ವಾಣಿಜ್ಯ ಸಂಸ್ಥೆಗಳ, ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಪ್ರತಿಶತ 60 ರಷ್ಟು ಕನ್ನಡ ಇರಬೇಕು ಎಂದು ಗಡುವು ವಿಧಿಸಿತ್ತು. ಈ ಸಂಬಂಧದ ಸುಗ್ರೀವಾಜ್ಞೆಗೆ ಸಹಿ ಹಾಕಲು ರಾಜ್ಯಪಾಲರಿಗೆ ಸರ್ಕಾರ ಕಳಿಸಿತ್ತು. ಆದರೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸುಗ್ರೀವಾಜ್ಞೆಗೆ ಸಹಿ ಹಾಕದೇ ಸರಕಾರಕ್ಕೆ ವಾಪಸ್ ಕಳಿಸಿದ್ದಾರೆ.

ರಾಜ್ಯಪಾಲರ ಈ ನಡೆಯ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯಪಾಲರ ನಡೆಯನ್ನು ಆಡಳಿತ ಪಕ್ಷ ಮಾತ್ರವಲ್ಲ ವಿಪಕ್ಷ ಬಿಜೆಪಿ ನಯಕರು ತೀವ್ರವಾಗಿ ಕಡ್ಡಿಸಬೇಕು. ಅಲ್ಲದೇ ನಾಳೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನಡೆ ವಿರೋಧಿ ನಿಲುವನ್ನು ತಳೆದು ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ಮತ್ತೆ ರಾಜಭವನಕ್ಕೆ ಕಳಿಸಬೇಕು ಎಂದು ಆಗ್ರಹಿಸಿವೆ.

ರಾಜ್ಯಪಾಲರ ಈ ನಡೆ ಕರ್ನಾಟಕ ಹಾಗೂ ಕನ್ನಡಿಗರ ವಿರೋಧಿ ಕ್ರಮವಾಗಿದ್ದು ಈ ನಡೆಯ ಹಿಂದೆ ಕನ್ನಡೇತರ ಉದ್ದಿಮೆದಾರ ಮತ್ತು ವಾಣಿಜ್ಯ ಸಂಸ್ಥೆಗಳು ಇರಬಹುದೆಂಬ
ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವು ಕುತೂಹಲಕಾರಿ. ರಾಜ್ಯದ ಕನ್ನಡಿಗರಿಗೆ ಅವರು ನೀಡಿದ ಭರವಸೆಯಂತೆ ಫೆಬ್ರುವರಿ 28 ರ ಗಡುವಿಗೆ ಸರಕಾರ ಬದ್ಧವಿರಲೇ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಸುಗ್ರೀವಾಜ್ಞೆಯನ್ನು ಸಹಿಗಾಗಿ ಮತ್ತೊಮ್ಮೆ ರಾಜಭವನಕ್ಕೆ ಕಳುಹಿಸಿ.

ರಾಜ್ಯಪಾಲರು ತಮ್ಮ ತಪ್ಪನ್ನು ತಿದ್ದಿಕೊಂಡು ಸುಗ್ರೀವಾಜ್ಞೆಗೆ ಸಹಿ ಮಾಡಿ ಕಳಿಸದಿದ್ದರೆ ನಾಡಿನಾದ್ಯಂತದ ಕನ್ನಡ ಸಂಘ ಸಂಸ್ಥೆಗಳು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಶೋಕ್ ಚಂದರಗಿ ಎಚ್ಚರಿಕೆ ನೀಡಿದ್ದಾರೆ.

Related Articles

Back to top button