ನ್ಯಾಯಾಲಯಕ್ಕೆ ಡಿಕೆಶಿ ಹಾಜರು; ಬಿಜೆಪಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

D.K.Shivkumr attending court; Kumaraswamy's outrage against BJP

ನ್ಯಾಯಾಲಯಕ್ಕೆ ಡಿಕೆಶಿ ಹಾಜರು; ಬಿಜೆಪಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಪ್ರಗತಿವಾಹಿನಿ ಸುದ್ದಿ, ನವದೆಹಲಿ/ ಬೆಂಗಳೂರು – ನಿನ್ನೆ ರಾತ್ರಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ.

ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ ವಿಶೇ, ನ್ಯಾಯಾಧೀಶರ ಎದುರು ಅವರನ್ನು ಹಾಜರುಪಡಿಸಲಾಗಿದ್ದು, ಇಡಿ 8 ದಿನ ತನ್ನ ಕಸ್ಟಡಿಗೆ ಅವರನ್ನು ನೀಡುವಂತೆ ಕೋರಲಿದ್ದಾರೆ. ಹೆಚ್ಚಿನ ವಿಚಾರಣೆ ಬಾಕಿ ಇರುವುದರಿಂದ ಅವರನ್ನು ಇಡು ಕಸ್ಟಡಿಗೆ ಕೊಡುವಂತೆ ಕೋರಲಾಗುತ್ತಿದೆ. ಇದೇ ವೇಳೆ ಶಿವಕಮಾರ ಅವರ ಪರವಾಗಿ ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ವಿಚಾರಣೆಗೆ ಕರೆದಾಗಲೆಲ್ಲ ಅವರು ಹಾಜರಾಗಲಿದ್ದಾರೆ. ಹಾಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಅವರು ಅರ್ಜಿ ಹಾಕುತ್ತಿದ್ದಾರೆ.

ನಿನ್ನೆ ಬಂಧನಕ್ಕೊಳಗಾದ ನಂತರ ಅನಾರೋಗ್ಯ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಸ್ವಲ್ಪ ಹೊತ್ತಿನ ಮೊದಲು ಅವರನ್ನು ಆಸ್ಪತ್ರೆಯಿಂದ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಾಗಿದೆ. ನ್ಯಾಯಾಲಯದ ತೀರ್ಮಾನ ಎಲ್ಲರ ಕೂತೂಹಲಕ್ಕೆ ಕಾರಣವಾಗಿದೆ.

ಈ ಮಧ್ಯೆ ಕರ್ನಾಟಕದ ಹಲವೆಡೆ ಡಿ.ಕೆ.ಶಿವಕುಮಾರ ಪರ ಪ್ರತಿಭಟನೆಗಳು ನಡೆದಿವೆ. ರಾಮನಗರ, ಕನಕಪುರ, ಬೆಂಗಳೂರು, ಮಂಗಳೂರು, ಬೆಳಗಾವಿ ಮೊದಲಾದ ಕಡೆಗಳಲ್ಲಿ ತೀವ್ರ ಪ್ರತಿಭಟನೆ ನಡೆದಿದೆ. ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈಗಲೂ ವ್ಯಾಪಾರ ಮುಂದುವರಿದಿದೆ

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಡಿ.ಕೆ.ಶಿವಕುಮಾರ ಬಂಧನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರದ ಮತ್ತು ರಾಜ್ಯದ ಬಿಜೆಪಿ ಸರಕಾರಗಳ ವಿರುದ್ಧ ಕುಮಾರಸ್ವಾಮಿ ತೀವ್ರವಾಗಿ ಕಿಡಿಕಾರಿದರು.

ನಿನ್ನ ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ ಅವರನ್ನು ಬಿಡುಗಡೆ ಮಾಡಲು ಇಡಿ ನಿರ್ಧರಿಸಿತ್ತು. ಆದರೆ ನಂತರದ 15 ನಿಮಿಷದಲ್ಲಿ ಎಲ್ಲವೂ ಬದಲಾಗಿದೆ. ಯಾರ ಪೋನ್ ಹೋಗಿತ್ತು ಎನ್ನುವ ಮಾಹಿತಿ ನಮಗಿದೆ. ಕೇಂದ್ರದ ಬಿಜೆಪಿ ಸರಕಾರ ಇಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಕೆಡವಿ ಬಿಜೆಪಿ ಸರಕಾರ ತರಲು ಎಷ್ಟು ದುಡ್ಡು ಕೊಟ್ಟಿದ್ದಾರೆ. ಹೇಗೆ ವ್ಯಾಪಾರ ನಡೆಸಿದ್ದಾರೆ ಎಲ್ಲವೂ ಗೊತ್ತಿದೆ. ಆದರೆ ಆಗ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಗಳೆಲ್ಲ ಎಲ್ಲಿ ಹೋಗಿದ್ದವು. ಈಗಲೂ ಬಿಜೆಪಿ ಶಾಸಕರ ಜೊತೆ ವ್ಯಾಪಾರ ಮುಂದುವರಿಸಿದೆ. ಶಾಸಕರಿಗೆಲಲ್ 20-30 ಕೋಟಿ ಹಣ ಮತ್ತು ನಿಗಮ ಮಂಡಳಿ ಚೇರಮನ್ ಕೊಡುವುದಾಗಿ ಆಮಿಶ ಒಡ್ಡಲಾಗುತ್ತಿದೆ ಎಂದು ಕುಮಾರಸ್ವಾಮಿ ದೂರಿದರು.