ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ರಾಜ್ಯೋತ್ಸವದ ಭಾಷಣದ ವೇಳೆ ಸಚಿವರಿಬ್ಬರು ಯಡವಟ್ಟು ಮಾಡಿಕೊಂಡಿದ್ದಾರೆ. ಸಚಿವ ವಿ.ಸೋಮಣ್ಣ ಕುಮಾರವ್ಯಾಸ ಎನ್ನಲು ಹೋಗಿ ಕುಮಾರಸ್ವಾಮಿ ಎಂದರೆ, ಶ್ರೀರಾಮುಲು ಮಾಸ್ತಿ ಎನ್ನಲು ಹೋಗಿ ಮಸ್ತಿ ಮಾಡಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಭಾಷಣ ಮಾಡಿದ ಸಚಿವ ವಿ ಸೋಮಣ್ಣ, ಕರ್ನಾಟಕದ ಕವಿಗಳ ಬಗ್ಗೆ ಪ್ರಸ್ತಾಪಿಸುತ್ತಾ, ಕವಿ ಕುಮಾರವ್ಯಾಸ ಎನ್ನುವುದನ್ನು ಕುಮಾರಸ್ವಾಮಿ ಎಂದು ಉಚ್ಛರಿಸಿದ್ದಾರೆ. ಪಂಪ, ರನ್ನ, ಜನ್ನ, ಪೊನ್ನ, ಕುಮಾರಸ್ವಾಮಿ ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಚಿತ್ರದುರ್ಗದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಸಚಿವ ಬಿ.ಶ್ರೀರಾಮುಲು ಕನ್ನಡದ ಮಾಸ್ತಿ ಎಂದು ಹೇಳುಲು ಮಸ್ತಿ ಎಂದು ಉಚ್ಛರಿಸಿ ಯಡವಟ್ಟು ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ