ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಕನ್ನಡಿಗ ಜಸ್ಟೀಸ್ ಎಸ್. ಅಬ್ದುಲ್ ನಜೀರ್ ಅವರು ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಈ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ. ನಜೀರ್ ಮೂಲತಃ ಕರ್ನಾಟಕದ ಮೂಡಬಿದಿರೆಯ ಬೆಳುವಾಯಿಯವರು. ನಜೀರ್ ಮೂಲತಃ ಕರ್ನಾಟಕದ ಮೂಡಬಿದಿರೆಯ ಬೆಳುವಾಯಿಯವರಾಗಿರುವುದು ವಿಶೇಷ.
2017 ರಿಂದ 2023 ರವವರೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಯಾಗಿದ್ದ ಅಬ್ದುಲ್ ನಜೀರ್ ಅವರು ಕಳೆದ ಜನವರಿ 4 ರಂದು ನಿವೃತ್ತರಾಗಿದ್ದರು. ಅವರು ಅಯೋಧ್ಯೆ ರಾಮ ಜನ್ಮಭೂಮಿ ವಿಷಯದಲ್ಲಿ ತೀರ್ಪು ನೀಡಿದ ಪೀಠದ ಸದಸ್ಯರಾಗಿದ್ದರು.
2017ರಲ್ಲಿ ತ್ರಿವಳಿ ತಲಾಖ್ ಹಾಗೂ ಆಧಾರ್ ಪ್ರೈವಸಿಗೆ ಸಂಬಂಧಿಸಿದ ತೀರ್ಪುಗಳನ್ನು ನೀಡಿದವರು ಅಬ್ದುಲ್ ನಜೀರ್.
ಸರಳತೆ ಹಾಗೂ ಸಜ್ಜನಿಕೆಗೆ ಹೆಸರಾಗಿರುವ ಅಬ್ದುಲ್ ನಜೀರ್ ಅವರು ಸರಳತೆ ಹಾಗೂ ಸಜ್ಜನಿಕೆಯಿಂದಲೇ ಗುರುತಿಸಲ್ಪಟ್ಟಿದ್ದಾರೆ. ಅವರ ನಿವೃತ್ತಿ ವೇಳೆಗೆ ಸಿಜೆಐ ಡಿ.ವೈ ಚಂದ್ರಚೂಡ್ ಅವರು ನ್ಯಾಯಮೂರ್ತಿ ನಜೀರ್ ಅವರ ಸರಳತೆಯನ್ನು ಕೊಂಡಾಡಿದ್ದನ್ನು ಸ್ಮರಿಸಬಹುದಾಗಿದೆ.
ವಿಐಪಿ, ವಿವಿಐಪಿಗಳು ಪಾಸ್‌ಪೋರ್ಟ್ ಹೊಂದಿರುವುದು, ಆಗಾಗ ವಿದೇಶ ಯಾತ್ರೆ ಕೈಗೊಳ್ಳುವುದು ಸಾಮಾನ್ಯ. ಆದರೆ ಅಬ್ದುಲ್ ನಜೀರ್ ಅವರ ಬಳಿ 2019ರವರೆಗೂ ಪಾಸ್‌ಪೋರ್ಟ್ ಇರಲಿಲ್ಲ. ಇತ್ತೀಚೆಗಷ್ಟೇ ಅವರು ಮೊದಲ ಬಾರಿ ಮಾಸ್ಕೋಗೆ ಭೇಟಿ ನೀಡಿದ್ದರು.
ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ನೆರೆಯ ಆಂಧ್ರ ಪ್ರದೇಶ ರಾಜ್ಯಪಾಲರಾಗಿ ಹುದ್ದೆ ಅಲಂಕರಿಸುತ್ತಿರುವುದು ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದೆ.
ಮುಖ್ಯಮಂತ್ರಿ ಅಭಿನಂದನೆ:
ಕನ್ನಡಿಗ ಜಸ್ಟಿಸ್ ಅಬ್ದುಲ್ ನಜೀರ್ ಅವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ನೇಮಿಸಿರುವುದಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಬೊಮ್ಮಾಯಿ, ಜಸ್ಟಿಸ್ ಅಬ್ದುಲ್ ನಜೀರ್ ಅವರು ಕನ್ನಡಿಗರಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
*13 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ*
https://pragati.taskdun.com/13-new-governorappointpresident/
ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಭಾವೈಕ್ಯತೆ ವೃದ್ಧಿ: ಪಿ.ಜಿ.ಆರ್ ಸಿಂಧ್ಯಾ
https://pragati.taskdun.com/morale-development-by-scouts-and-guides-pgr-sindhya/
ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ರಮೇಶ್ ಬೈಸ್ ನೇಮಕ
https://pragati.taskdun.com/ramesh-bais-appointed-as-the-new-governor-of-maharashtra/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ