ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸಧ್ಯಕ್ಕೆ ಸ್ಟುಡಿಯೋ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಹೃದಯಾಘಾತದಿಂದ ವಿಧಿವಶರಾಗಿರುವ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಸಮಾಧಿ ಪಕ್ಕದಲ್ಲಿ ಇಂದು ಮುಂಜಾನೆ ನೆರವೇರಿಸಲಾಗಿದ್ದು, ಕುಟುಂಬದವರಿಂದ ಹಾಲು-ತುಪ್ಪ ಶಾಸ್ತ್ರ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಹಾಲು-ತುಪ್ಪ ಕಾರ್ಯ ಮುಗಿಯುವವರೆಗೆ ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಪುನೀತ್ ಕುಟುಂಬಸ್ಥರಿಂದ ಇಂದು ಹಾಲುತುಪ್ಪ ಕಾರ್ಯ ಇರುವುದಿಲ್ಲ, ಇಂದು ಪೂಜೆ ಮಾತ್ರ ಇದ್ದು, 5ನೇ ದಿನ ಮಂಗಳವಾರ ಹಾಲು ತುಪ್ಪ ಶಾಸ್ತ್ರ ನಡೆಯಲಿದೆ. ಕುಟುಂಬದವರಿಂದ ಹಾಲು-ತುಪ್ಪ ಶಾಸ್ತ್ರ ಮುಗಿದ ಬಳಿಕ ಕಂಠೀರವ ಸ್ಟುಡಿಯೋ ಒಳಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಸಧ್ಯಕ್ಕೆ ಕಂಠೀರವ ಸ್ಟುಡಿಯೋ ಒಳಗೆ ನಿರ್ಬಂಧ ವಿಧಿಸಲಾಗಿದೆ ಎಂದು ವಿವರಿಸಿದರು.
ಪುನೀತ್ ಪತ್ನಿಗೆ ಧ್ವಜ ಹಸ್ತಾಂತರಿಸಿದ ಭಾವುಕ ಕ್ಷಣ (ವಿಡೀಯೋ ಸಹಿತ ವರದಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ