Latest

ಸ್ವಿಮಿಂಗ್ ಮಾಡುವಾಗ ನೀರಿನಲ್ಲಿ ಮುಳುಗಿ ವೈದ್ಯೆ ಸಾವು

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಕೆರೆಯಲ್ಲಿ ಈಜುವಾಗ ನೀರಿನಲ್ಲಿ ಮುಳುಗಿ ವೈದ್ಯೆಯೊಬ್ಬರು ಸಾವನ್ನಪ್ಪಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಡಾ.ಮೈಜಿ ರರೋಲ್ ಫರ್ನಾಂಡಿಸ್ (31) ಮೃತ ವೈದ್ಯೆ. ಮಂಗಳೂರಿನ ಪ್ರಶಾಂತ ನಗರದ ನಿವಾಸಿಯಾಗಿರುವ ಮೈಜಿ ವೈದ್ಯಕೀಯ ಶಿಕ್ಷಣ ಮುಗಿಸಿ ಕೇಪು ಗ್ರಾಮದಲ್ಲಿ ವಾರಣಾಸಿ ಫಾರ್ಮ್ ಗೆ ಕೆಲ ದಿನಗಳ ಹಿಂದೆ ಆಗಮಿಸಿದ್ದರು.

Home add -Advt

ಈ ವೇಳೆ ಕೆರೆಯಲ್ಲಿ ಈಜಲು ಹೋಗಿದ್ದಾರೆ. ಎಷ್ಟು ಹೊತ್ತಾದರೂ ವಾಪಸ್ ಬಾರದಿದ್ದಾಗ ಮನೆಯವರು ಕೆರೆ ಬಳಿ ಹೋಗಿ ನೋಡಿದಾಗ ಮೈಜಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಗೊತ್ತಾಗಿದೆ.

ಫ್ಲೈಓವರ್ ಮೇಲಿಂದ ಹಾರಿ ಬಿದ್ದು ಯುವಕ-ಯುವತಿ ದುರ್ಮರಣ

ಬಾಲಕಿ ಅಪಹರಿಸಿ ಲೈಂಗಿಕ ದೌರ್ಜನ್ಯ; ಅಪರಾಧಿಗೆ 20 ವರ್ಷ ಜೈಲುಶಿಕ್ಷೆ ಪ್ರಕಟ

Related Articles

Back to top button