Kannada NewsLatest

ಬೆಳಗಾವಿಯಲ್ಲಿ ಕರೋಕೆ ಹಾಡುಗಾರಿಕೆ ಸ್ಪರ್ಧೆ-2019

ಬೆಳಗಾವಿಯಲ್ಲಿ ಕರೋಕೆ ಹಾಡುಗಾರಿಕೆ ಸ್ಪರ್ಧೆ-2019

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ನಿವೇದಾರ್ಪಣ ಸಂಗೀತ ಅಕಾಡೆಮಿ ವತಿಯಿಂದ ಬೆಳಗಾವಿಯಲ್ಲಿ ಕರೋಕೆ ಹಾಡುಗಾರಿಕೆ ಸ್ಪರ್ಧೆ -2019ಯನ್ನು ಆಗಸ್ಟ್ 10ಮತ್ತು 11 ರಂದು ಯೋಜಿಸಿದೆ.

ಸ್ಪರ್ಧೆಯು 10 ರಿಂದ 15 ವಯೋಮಿತಿ, 16-ರಿಂದ 30 ವರ್ಷ ಮತ್ತು 30 ವರ್ಷ ವಯೋಮಿತಿ ಮೇಲ್ಪಟ್ಟವರಿಗಾಗಿ ಮುಕ್ತ ವಿಭಾಗವಾಗಿ 03 ವರ್ಗಗಳಿಂದ ತಲಾ 5 ಉತ್ತಮ ಪ್ರದರ್ಶನ ನೀಡುವ ಹಾಡುಗಾರರನ್ನು ಆಯ್ಕೆ ಮಾಡಿ ಅವರಿಗೆ ಮಾರ್ಗದರ್ಶನ ನೀಡಿ ಅಕಾಡೆಮಿ ವತಿಯಿಂದ ಸಾರ್ವಜನಿಕ ವೇದಿಕೆ ಕಲ್ಪಿಸಿ ಗುಲದಸ್ತಾ ಕಾರ್ಯಕ್ರಮದಲ್ಲಿ ಹಾಡಲು ಅವಕಾಶ ನೀಡಿ ಗೌರವಿಸುವ ಉದ್ದೇಶದಿಂದ ಸ್ಪರ್ಧೆ ಏರ್ಪಡಿಸಲಾಗಿದೆ.

ಕನ್ನಡ,ಮರಾಠಿ,ಹಿಂದಿ ಯಾವದೇ ಭಾಷೆಯ ಹಾಡನ್ನು ಹಾಡಬಹುದಾಗಿದೆ. ಹಾಡುಗಾರರು ಕನಿಷ್ಠ 3 ತಮ್ಮ ಇಷ್ಟದ ಕರೋಕೆ ಟ್ರ್ಯಾಕ್ ತರತಕ್ಕದ್ದು. ನೊಂದಣಿ ಶುಲ್ಕ. ರೂ.200/- ಹೆಸರು ನೋಂದಣಿಗೆ ಕೊನೆಯ ದಿನಾಂಕ 25/07/2019.ಇರುವುದಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ:7349760593 ಗೆ ಸಂಪರ್ಕಿಸಲು ಅಕ್ಯಾಡಮಿ ಮುಖ್ಯಸ್ಥೆ ನಿವೇದಿತಾ ಚಂದ್ರಶೇಖರ ತಿಳಿಸಿದ್ದಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button