Belagavi NewsBelgaum NewsKannada NewsKarnataka News

*ವಿದ್ಯುತ್ ವ್ಯತ್ಯಯಕ್ಕೆ ಕರವೇ ಆಕ್ರೋಶ: ದರ ಇಳಿಸಿ ಸಮರ್ಪಕ ವಿದ್ಯುತ್ ಪೂರೈಸುವಂತೆ ಮನವಿ*

ಪ್ರಗತಿವಾಹಿನಿ ಸುದ್ದಿ: ಪಟ್ಟಣದಲ್ಲಿ ದಿನನಿತ್ಯ ವಿದ್ಯುತ್ ಸರಿಯಾಗಿ ಸರಬರಾಜು ಆಗದಿರುವ ಹಿನ್ನಲೆಯಲ್ಲಿ ಹಲವಾರು ಕಾರ್ಖಾನೆಗಳು, ಗ್ಯಾರೇಜಗಳು, ಹಾಲಿನ ಡೈರಿಗಳು, ಹೊಟೇಲಗಳು ಸೇರಿದಂತೆ ಇನ್ನು ಹಲವಾರು ಉದ್ಯೋಗಗಳಿಗೆ ಕಾರ್ಯನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮೆಕ್ಯಾನಿಕಲ್ ಅಸೋಸಿಯೇಷನ್, ಸಾರ್ವಜನಿಕರು ಹೆಸ್ಕಾಂ ಇ ಇ ಅನಂದ್ ನಾಯಿಕ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆಯಾದಲ್ಲಿ ಪಟ್ಟಣದಲ್ಲಿರುವ ವಿದ್ಯುತ್ ಸರಬರಾಜನ್ನು ನಿಲ್ಲಿಸಿ ದಿನಕ್ಕೆ ಸುಮಾರು ಐದರಿಂದ ಆರು ಬಾರಿ ಒಂದು ಗಂಟೆ ಅರ್ಧ ಗಂಟೆ ವಿದ್ಯುತ್ ಸರಬರಾಜುದಲ್ಲಿ ತೊಂದರೆ ಮಾಡುವುದರಿಂದ ಉದ್ಯೋಗಗಳ ಮೇಲೆ ಭಾರೀ ಪ್ರಮಾಣದ ಹೊಡೆತ ಬೀಳುತ್ತಿದ್ದು ಆದಷ್ಟು ಬೇಗನೆ ಪಟ್ಟಣದಲ್ಲಿ ಅಂಡರ್ ಗ್ರೌಂಡ್ ವಿದ್ಯುತ್ ಕಾಮಗಾರಿಯನ್ನು ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿರುವ ವಾಣಿಜ್ಯ ವಿದ್ಯುತ್ ಸಂಪರ್ಕದ ಕನಿಷ್ಠ ದರ ಮೊದಲು 100ರೂ ಇತ್ತು ಈಗ 240ರೂ ಹೆಚ್ಚಿಗೆ ಮಾಡಲಾಗಿದೆ. ಸದರಿ ದರವನ್ನು ಕಡಿತ ಮಾಡಿ ವಾಣಿಜ್ಯ ಉದ್ಯೋಗದಾರರಿಗೆ ಹೊರೆಯಾದ ದರ ಇಳಿಸಿ, ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸುವದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ರಾಜಶೇಖರ ಗಡ್ಡಿ, ನಾರಾಯಣ ಮೇತ್ರಿ, ರಾಜು ಕುಲಗುಡೆ, ಕೃಷ್ಣ ಲೋಹಾರ, ಆನಂದ ಹುದ್ದಾರ, ಮಲ್ಲು ಕುಲಗುಡೆ, ಸಂತೋಷ ಕೋಳಿ, ಉಮೇಶ ಮಸಾಲಾಜಿ, ಪ್ರಕಾಶ ಮಾಳಿ ಹಾಗೂ ಇತರರು ಉಪಸ್ಥಿತರಿದ್ದರು.

Home add -Advt


Related Articles

Back to top button