
ಪ್ರಗತಿವಾಹಿನಿ ಸುದ್ದಿ: ಬೇಸಿಗೆ ಆರಂಭಕ್ಕು ಮುನ್ನವೇ ಈಬಾರಿ ಬಿಸಿಲ ಝಳ ಹೆಚ್ಚಾಗಿದ್ದು, ರಾಜ್ಯದ ಹಲವು ಜಿಲೆಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಈ ನಡುವೆ ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಗಾಳಿ ಎಚ್ಚರಿಕೆ ನೀಡಲಾಗಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಧಿಕಾರ ಸೂಚನೆ ನೀಡಿದ್ದು, ಕರಾವಳಿಯಲ್ಲಿ ಇಂದು ಹಾಗೂ ನಾಳೆ ಫೆ.27ರಂದು ಬಿಸಿಗಾಳಿ ಬೀಸಲಿದೆ. ಸಾವರ್ಜನಿಕರು ಮುಂಜಾಗೃತೆವಹಿಸಬೇಕು ಎಂದು ಸೂಚಿಸಿದೆ.
ಇದೇ ವೇಳೆ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂತ ತಾಪಮಾನ ಹೆಚ್ಚಳವಾಗಿದೆ. ಈ ನಡುವೆ ಬಿಸಿಗಾಳಿ ಎಚ್ಚರಿಕೆ ನೀಡಲಾಗಿದೆ.