Latest

*ಶಿಲ್ಪಕಲೆ ಹಾಗೂ ಶಿಲ್ಪಿಗಳಿಗೆ ಪ್ರೋತ್ಸಾಹ ಅತ್ಯವಶ್ಯಕ: ಚಿರಂಜೀವಿ ಸಿಂಗ್ ಅಭಿಮತ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ಇತಿಹಾಸದ ಕಾಲಘಟ್ಟದಿಂದಲೂ ಶಿಲ್ಪ ಕಲೆಗೆ ಬಹಳ ದೊಡ್ಡ ಮಹತ್ವ ಇದೆ. ಅದನ್ನು ಮುಂದಿನ ಪೀಳಿಗೆಗೂ
ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ನಿವೃತ್ತ ಐಎಎಸ್ ಅಪರ ಮುಖ್ಯಕಾರ್ಯದರ್ಶಿಗಳಾದ ಚಿರಂಜೀವಿಸಿಂಗ್ ಅವರು ಅಭಿಪ್ರಾಯಪಟ್ಟರು

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅವರಣದಲ್ಲಿ ಏರ್ಪಡಿಸಿದ್ದ ಪ್ರಭಾಕರ್ (ಎ.ಆರ್.ಎಸ್) ಅವರ “ಕಂಪನಿ ಮನೆ’ ಶಿಲ್ಪಿಗಳು (ಆಂಗ್ಲ ಭಾಷಾರಚನೆ) ಕೃತಿ ಬಿಡುಗಡೆ ಮಾಡಿ ಮಾತನಾಡಿದರು

ನಮ್ಮ‌ರಾಜ್ಯದ ಶಿಲ್ಪಕಲೆಗಳು ಹಾಗೂ ಶಿಲ್ಪಿಗಳಿಗೆ ಪ್ರೋತ್ಸಾಹ ನೀಡಲು ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿದ್ದ ಸಂದರ್ಭದಲ್ಲಿ ಶಿಲ್ಪಕಲಾ ಅಕಾಡಮಿ ಸ್ಥಾಪನೆಗೆ ಶಿಫಾರಸ್ಸು ಮಾಡಿದ್ದೆ. ಅದರಂತೆ ಅಕಾಡೆಮಿ ಪ್ರಾರಂಭವಾಗಿ ಉತ್ತಮವಾಗಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇದಕ್ಕೆ ಪ್ರೋತ್ಸಾಹ ನೀಡುವುದು ಅತಿ ಅವಶ್ಯಕವಾಗಿದೆ ಎಂದರು.

ನಾನು‌ ಶಿಲ್ಪಕಲೆಯ ಅಭಿಮಾನಿ ನಮ್ಮ ಭಾಗದಲ್ಲಿ ಶಿಲ್ಪಿಗಳಿಗೆ ಹಾಗೂ ಶಿಲ್ಪಕಲೆ ಗಳಿಗೆ ಪ್ರೋತ್ಸಾಹ ನೀಡಬೇಕು. ನಾನು ಹುಮ್ಮಸ್ಸಿನಿಂದ ಅಂದು ಮಾಡಿದ ಪ್ರಯತ್ನ ಇಂದು ಉತ್ತಮವಾಗಿ ಬೆಳೆದುಕೊಂಡು ಬಂದಿದ್ದು ಸಂತೋಷದ ವಿಷಯವಾಗಿದೆ. ಇದನ್ನು ಮುಂದುವರಿಸಿಕೊಂಡು
ನಡೆಯಬೇಕಾಗಿರುವದು ಅವಶ್ಯಕವಾಗಿದೆ ಎಂದರು.

Home add -Advt

ನಮ್ಮ‌ ಪರಂಪರೆಯಲ್ಲಿ ಕಲೆ ಮತ್ತು ಶಿಲ್ಪಕಲೆಗಳು ಎರಡು ಪ್ರಮುಖವಾದ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ಸರಕಾರದ ಜೊತೆಗೆ ಸರ್ವರ ಸಹಭಾಗಿತ್ವವು ಅತಿ ಮುಖ್ಯವಾಗಿದೆ ಎಂದರು. ನಮ್ಮ‌ಶಿಲ್ಪ ಸಾಹಿತ್ಯಕ್ಕೆ ದೊಡ್ಡವರ ಕೊಡುಗೆ ಬಹಳ ವಿರಳ. ಶಿಲ್ಪಕಲೆಗೆ ಒತ್ತು ಕೊಡುವದು ಅತಿ ಅವಶ್ಯಕವಾಗಿದೆ ಎಂದರು.

ಪುಸ್ತಕದ ಕುರಿತು ಮಾತನಾಡಿದ ಅವರು ಪ್ರಥಮದಲ್ಲಿ ನನಗೆ ಕಂಪನಿ ಮನೆಯ ಶಿಲ್ಪಿಗಳು ಏನಿದು ಎನ್ನುವ ಬಗ್ಗೆ ತುಂಬ ಕುತೂಹಲ ಇತ್ತು ಅದನ್ನು ಪುಸ್ತಕ ಓದಿದ ನಂತರ ತಿಳಿದುಕೊಂಡೆ ಎಂದರು.

ಪುಸ್ತಕ ಮತ್ತು ಕೃತಿಕಾರನ ಕುರಿತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಧ್ಯಕ್ಷರಾದ ಶಿವಾನಂದ ತಗಡೂರ ಅವರು ಮಾತನಾಡಿ, ಕಲಾಕೃತಿಗಳು ಮತ್ತು ಕಲೆಯ ಬಗ್ಗೆ ಪುಸ್ತಕಗಳು ಬರುವುದು ಅಪರೂಪ. ಇಂತಹ ಸಂದರ್ಭದಲ್ಲಿ ಪ್ರಭಾಕರ್ ಅವರ ಪುಸ್ತಕ ಕಂಪನಿ ಮನೆ ಶಿಲ್ಪಿಗಳು ಇಂಗ್ಲಿಷ್ ಅವತರಣಿಕೆಯಲ್ಲಿ ಹೊರ ಬರುತ್ತಿರುವುದು ಸಂತೋಷದ‌ ಸಂಗತಿಯಾಗಿದೆ ಎಂದರು.

ಎಂಬತ್ತು ವಸಂತ ದಾಟಿರುವ ಪ್ರಭಾಕರ್ ಅವರ ಉತ್ಸಾಹ ಅನನ್ಯ ಮತ್ತು ಯುವ ಜನರಿಗೆ ಪ್ರೇರಣೆ ಆಗಿದೆ ಎಂದರು.
ಶಿಲ್ಪ ಕಲಾ ಅಕಾಡಮಿ ಅಧ್ಯಕ್ಷರಾಗಿದ್ದ ಎನ್ ಜಿ ಹಳ್ಳಿ ಕಾಳಾಚಾರ್ ಅವರ ಒತ್ತಾಸೆಯಾಗಿ ಈ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಅಧಿಕಾರಿಯಾಗಿ ನಿವೃತ್ತಿ ಹೊಂದಿದರೂ ಕೂಡ, ಕನ್ನಡದ ಬಗ್ಗೆ ಅಪಾರವಾದ ಅಭಿಮಾನ ಹೊಂದಿರುವ ಚಿರಂಜೀವಿಸಿಂಗ್ ಅವರಂತಹ ಸರಳ ಸಜ್ಜನಿಕೆಯ ವ್ಯಕ್ತಿಯ ಹಸ್ತದಿಂದ ಪುಸ್ತಕ ಬಿಡುಗಡೆಯಾಗುತ್ತಲ್ಲಿರುವದು ಸಂತೋಷದ ಸಂಗತಿಯಾಗಿದೆ ಎಂದು ತಗಡೂರು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೃತಿಕಾರ ಪ್ರಭಾಕರ್ ಅವರು, ಕೃತಿ ರಚಿಸಬೇಕಾದ ಸಂದರ್ಭವನ್ನು ವಿವರಿಸಿ, ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

https://pragati.taskdun.com/dcm-d-k-shivakumarbangalorecity-rounds/

Related Articles

Back to top button