Belagavi NewsBelgaum NewsEducationKannada NewsKarnataka News

*ಪ್ರತಿಷ್ಠಿತ ಪ್ರಶಸ್ತಿ ಪಡೆದ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಸಂಸ್ಥೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ, ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಸಂಸ್ಥೆ (KLS GIT), ಬೆಂಗಳೂರಿನಲ್ಲಿ ನಡೆದ FKCCI Industry–Institution Leaders’ Confluence 2026 ಕಾರ್ಯಕ್ರಮದಲ್ಲಿ ಪ್ರತಿಷ್ಠಿತ “Excellence in Skill Development Award” ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು Federation of Karnataka Chambers of Commerce and Industry (FKCCI) ಆಯೋಜಿಸಿತು.

ಈ ಪ್ರಶಸ್ತಿಯನ್ನು KLS GIT ಕಾಲೇಜಿಮ ಪ್ರಾಂಶುಪಾಲರಾ ಡಾ. ವಿಜಯ ಅಥವಲೆ ಅವರು ಸ್ವೀಕರಿಸಿದರು. ಪ್ರಶಸ್ತಿಯನ್ನು Sansera Engg. Ltdನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ CA ಎಫ್. ಆರ್. ಸಿಂಗ್‌ವಿ ಅವರು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ, ಸಚಿವರಾದ ಡಾ. ಅಜಯ್ ಸಿಂಗ್, ಹಾಗೂ,ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಇ. ವಿ. ರಾಮಣ ರೆಡ್ಡಿ ಉಪಸ್ಥಿತರಿದ್ದರು.

ಈ ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಕೈಗಾರಿಕಾ ನಾಯಕರು, ಉನ್ನತ ಶಿಕ್ಷಣ ಸಂಸ್ಥೆಗಳು, ನೀತಿ ರೂಪಿಸುವವರು, ಸೆಕ್ಟರ್ ಸ್ಕಿಲ್ ಕೌನ್ಸಿಲ್‌ಗಳು, ಕಾನ್ಸುಲೇಟ್‌ಗಳು, ವಾಣಿಜ್ಯ ಪ್ರತಿನಿಧಿಗಳು ಹಾಗೂ ಜಾಗತಿಕ ವಾಣಿಜ್ಯ ಮಂಡಳಿಗಳ ಜಾಲವು ಸೇರಿಕೊಂಡು ಕೌಶಲ್ಯಾಭಿವೃದ್ಧಿ, ಉದ್ಯೋಗಾರ್ಹತೆ ಮತ್ತು ಕಾರ್ಮಿಕ ಪರಿವರ್ತನೆ ಕುರಿತು ಚರ್ಚೆ ನಡೆಸಿದರು.

ಈ ಗೌರವವು KLS GITನ ಕೌಶಲ್ಯಾಧಾರಿತ ಶಿಕ್ಷಣದ ನಿರಂತರ ಬದ್ಧತೆಯನ್ನು ಹಾಗೂ ಉದ್ಯಮೋನ್ಮುಖ ಕಾರ್ಮಿಕ ಶಕ್ತಿಯನ್ನು ರೂಪಿಸುವಲ್ಲಿ ಸಂಸ್ಥೆಯ ಪಾತ್ರವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಸಂಸ್ಥೆಯು ಕಳೆದ 47 ವರ್ಷಗಳ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button