ಪಕ್ಷದಲ್ಲಿಯೇ ಆಂತರಿಕ ಒಪ್ಪಂದ ಮಾಡಿಕೊಂಡ ಸಿಎಂ; ಗಡಿ ವಿಚಾರದಲ್ಲಿ ಬೇಕೆಂದೇ ವಿವಾದ ಸೃಷ್ಟಿ; ಡಿಕೆಶಿ ಗಂಭೀರ ಆರೋಪ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಾರಾಷ್ಟ್ರ ಜತೆಗಿನ ಗಡಿ ವಿವಾದದ ಬಗ್ಗೆ ಮುಖ್ಯಮಂತ್ರಿಗಳ ಮಾತಿಗೆ ಪ್ರಾಮುಖ್ಯತೆ ನೀಡುತ್ತೇನೆ. ಬೇರೆಯವರ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ತಮ್ಮ ಪಕ್ಷದಲ್ಲಿ ಆಂತರಿಕ ಒಪ್ಪಂದ ಮಾಡಿಕೊಂಡು, ರಾಜ್ಯದ ಗಂಭೀರ ವಿಚಾರಗಳನ್ನು ಮರೆಮಾಚಲು ಈ ವಿವಾದ ಎಬ್ಬಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಡಿ.6 ರಂದು ಮಹಾರಾಷ್ಟ್ರ ಸಚಿವರು ಬೆಳಗಾವಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಬಗ್ಗೆ ಸರ್ಕಾರಕ್ಕೆ ಯಾವ ಸಲಹೆ ನೀಡುತ್ತೀರಿ ಎಂದು ಕೇಳಿದಾಗ, ‘ ಸರ್ಕಾರ ನಮ್ಮ ಅಭಿಪ್ರಾಯ ಕೇಳಿದರೆ ನಾವು ಸಲಹೆ ನೀಡಬಹುದು. ಆದರೆ ಅವರು ಪ್ರಮುಖ ವಿಚಾರ ಮರೆಮಾಚಲು ಈ ವಿವಾದ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಚುನಾವಣಾ ಸಮಿತಿ ರಚನೆ ಹಾಗೂ ಚುನಾವಣೆ ಟಿಕೆಟ್ ಮೊದಲ ಪಟ್ಟಿ ಬಗ್ಗೆ ಆದಷ್ಟು ಶೀಘ್ರದಲ್ಲಿ ಪಟ್ಟಿ ಬರಲಿದೆ ಎಂದು ಹೇಳಿದರು.
ಬೆಳಗಾವಿ: ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ
https://pragati.taskdun.com/belagavi-gogate-collegekannadiga-studentattackbelagavi4-accused-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ