ಸೆ.13ರ ವರೆಗೆ ಡಿ.ಕೆ.ಶಿವಕುಮಾರ ಇಡಿ ಕಸ್ಟಡಿಗೆ

DK Shivakumara ED remanded till September 13

ಸೆ.13ರ ವರೆಗೆ ಡಿ.ಕೆ.ಶಿವಕುಮಾರ ಇಡಿ ಕಸ್ಟಡಿಗೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಸೆಪ್ಟಂಬರ್ 13ರ ವರೆಗೆ 9 ದಿನಗಳ ಕಾಲ ಅವರನ್ನು ಕಸ್ಟಡಿಗೆ ನೀಡಲಾಗಿದೆ.

ಡಿ.ಕೆ.ಶಿವಕುಮಾರ ಅವರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಬೇಕಾಗಿದೆ. ಹಾಗಾಗಿ ತನ್ನ ಕಸ್ಟಡಿಗೆ ನೀಡಬೇಕೆಂದು ಇಡಿ ಕೇಳಿತ್ತು. ಅದಕ್ಕೆ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ. ಕುಟುಂಬದ ಸದಸ್ಯರು ಪ್ರತಿನಿತ್ಯ ಶಿವಕುಮಾರ ಅವರನ್ನು ಭೇಟಿ ಮಾಡಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಡಿ.ಕೆ.ಶಿವಕುಮಾರ ಅವರನ್ನು ಕಸ್ಟಡಿಗೆ ನೀಡಿರುವುದರಿಂದ ಅವರ ಪರ ನಡೆಯುತ್ತಿರುವ ಪ್ರತಿಭಟನೆ ತೀವ್ರವಾಗುವ ಸಾಧ್ಯತೆ ಇದೆ. ನಿನ್ನೆ ಅವರನ್ನು ಬಂಧಿಸಿದಾಗಿನಿಂದಲೇ ರಾಜ್ಯದ ಹಲವೆಡೆ ಪ್ರತಿಭಟನೆ ಆರಂಭವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದ್ದರು.

4 ದಿನ ಸತತವಾಗಿ ವಿಚಾರಣೆ ನಡೆದಿದೆ. ವಿಚಾರಣೆಗೆ ಕರೆದಾಗಲೆಲ್ಲ ಶಿವಕುಮಾರ ಬರುತ್ತಿದ್ದಾರೆ. ಹಾಗಾಗಿ ಕಸ್ಟಡಿಗೆ ನೀಡಬಾರದು ಎಂದು ಶಿವಕುಮಾರ ಪರ ವಕೀಲರು ಕೋರಿದ್ದರು. ಅವರ ಆರೋಗ್ಯವೂ ಸರಿ ಇಲ್ಲ ಎಂದು ತಿಳಿಸಿದ್ದರು. ಆದರೆ ನ್ಯಾಯಾಧೀಶರು ಅದಕ್ಕೆ ಮನ್ನಣೆ ನೀಡಲಿಲ್ಲ.

ಸೆಪ್ಟಂಬರ್ 13ಕ್ಕೆ ಅವರ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.