Advertisement -Home Add

ಹೋಂ ಕ್ವಾರಂಟೈನ್ ಆಗಲ್ಲ -ಡಿಸಿಎಂ ಲಕ್ಷ್ಮಣ್ ಸವದಿ

ಇತ್ತೀಚಿನ ದಿನಗಳಲ್ಲಿ ನಾನು ಸಿಎಂ ಭೇಟಿಮಾಡಿಲ್ಲ

ಪ್ರಗತಿವಾಹಿನಿ ಸುದ್ದಿ, ಅಥಣಿ: ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಅವರ ಈ ಸೋಂಕಿನಿಂದ ಆದಷ್ಟು ಬೇಗನೆ ಗುಣಮುಖವಾಗಲಿ ಹಾಗೂ ದೇವರು ಅವರಿಗೆ ಆರೋಗ್ಯ ದಯಪಾಲಿಸಲಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಾರ್ಥನೆ ಮಾಡಿಕೊಂಡರು.
ಅವರು ಸ್ಥಳೀಯ ಕಾರ್ಯಕ್ರಮದ ನಿಮಿತ್ಯ ಆಗಮಿಸಿ ಪತ್ರಕರ್ತರೊಂದಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿಗಳು ಸ್ವತಃ ನನ್ನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರು ಕ್ವಾರೆಂಟೈನ್ ಆಗಿ ಅಂತ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾನು ಅವರನ್ನು ಭೇಟಿಮಾಡಿಲ್ಲ, ದೆಹಲಿಗೆ ಹೋಗಿಬಂದ ವಿಚಾರವನ್ನು ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ತಿಳಿಸಿದ್ದೇನೆ. ನಾನು ಕ್ವಾರೆಂಟೈನ್ ಆಗಲ್ಲ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷ್ಮಣ ಸವದಿ ಮುಂದಿನ ಸಿಎಂ ಎಂದು ವೈರಲ್ ಆಗಿರುವ ಪೋಟೋ ನನಗೆ ಸಂಬಂಧ ಇಲ್ಲ, ಅವರವರ ಅಭಿಪ್ರಾಯಗಳನ್ನು ಹಚ್ಚಿಕೊಂಡಿದ್ದಾರೆ, ಇಂತ ಊಹಾಪೋಹಗಳಿಗೆ ಕಿವಿಗೊಡಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬಾರದು ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ಕೊಕಟನೂರ ಪಶು ವೈದ್ಯಕೀಯ ಕಾಲೇಜು ಉದ್ಘಾಟನೆಗೆ ವೇಳೆ ನಿಗತಿ ಪಡಿಸಲಾಗಿತ್ತು. ಕೊರೊನಾ ವೈರಸ್ ನಿಂದ ಹಾಗೂ ಪ್ರಧಾನ ಕಾರ್ಯದರ್ಶಿ ಹೊಂ ಕ್ವಾರೆಂಟೈನ ಆಗಿದ್ದರಿಂದ ವಿಳಂಬವಾಗಿದೆ. ಇನ್ನು ೧೫ ದಿನದಲ್ಲಿ ಸಬಂಧ ಪಟ್ಟ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಉದ್ಘಾಟನೆ ದಿನಾಂಕ ಪ್ರಕಟಿಸುತ್ತೇನೆ ಎಂದು ತಿಳಿಸಿದರು.
ಶ್ರೀಮಂತ ಪಾಟೀಲ ಮರಾಠಿ ಭಾಷೆಯಲ್ಲಿ ಭಾಷಣ ವಿಚಾರವಾಗ ಮಾತನಾಡಿ, ಶ್ರೀಮಂತ ಪಾಟೀಲ ಅಪ್ಪಟ ಕನ್ನಡಿಗ. ಮಹಾರಾಷ್ಟ್ರದ ಉದ್ಯಮಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಬಂದಾಗ ಅವರಿಗೆ ನಮ್ಮ ಜನರು ಬೇಡಿಕೆಗಳನ್ನು ಮರಾಠಿ ಭಾಷೆಯಲ್ಲಿ ಮನವರಿಕೆ ಮಾಡಿದ್ದಾರೆ. ಇದರಲ್ಲಿ ಅನ್ಯತಾ ಭಾವಿಸಬಾರದು ಹಾಗೂ ಅವರು ಇದೆ ತಾಲೂಕಿನ ಶಿನಾಳ ಗ್ರಾಮದಲ್ಲಿ ಜನಿಸಿದವರು. ನೆಲ ಜಲದ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಎಂದು ಹೇಳಿದರು.
ಈ ವೇಳೆ ಸಚಿವ ಶ್ರೀಮಂತ ಪಾಟೀಲ, ಅಥಣಿ ಶಾಸಕ ಮಹೇಶ ಕುಮಠಳ್ಳಿ, ಕುಡಚಿ ಶಾಸಕ ಪಿ ರಾಜೀವ ಸೇರಿದಂತೆ ಇತರರು ಹಾಜರಿದ್ದರು.

.