Karnataka News

ಡಾ.ಪ್ರಭಾಕರ ಕೋರೆಗೆ ರಾಷ್ಟ್ರೀಯ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಸೆಪ್ಟೆಂಬರ್ ೧೩ ರಂದು ಬೆಂಗಳೊರಿನ ಅರಮನೆ ಮೈದಾನ ನಲ್‌ಪಾಡ್ ಮೈದಾನದಲ್ಲಿ ವೀರಭದ್ರೇಶ್ವರ ಜಯಂತಿ-೨೦೨೨ ಹಮ್ಮಿಕೊಳ್ಳಲಾಗಿದೆ.

ಸಮಾರಂಭಕ್ಕೆ ರಾಷ್ಟ್ರದ ಎಲ್ಲಡೆಯಿಂದ ಸಂಘಟನೆಯ ಸದಸ್ಯರು ಆಗಮಿಸುತ್ತಿದ್ದು ನಾಡಿನ ಅನೇಕ ರಾಜಕೀಯ ಹಾಗೊ ಸಾಮಾಜಿಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಆಗಾಧ ಸೇವೆ ಮಾಡಿರುವ ಡಾ.ಪ್ರಭಾಕರ ಕೋರೆಯವರಿಗೆ ಸಮಾರಂಭದಲ್ಲಿ ಪ್ರಸ್ತುತ ವರ್ಷದ ರಾಷ್ಟ್ರಮಟ್ಟದ ಶ್ರೀ ವೀರಭದ್ರೇಶ್ವರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.

ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಸಮಾರಂಭದಲ್ಲಿ ಉಪಸ್ಥಿತರಿರುವ ಉಜ್ಜನಿ ಪೀಠದ ಶ್ರೀಗಳಾದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಮಾಜಿ ಮುಖ್ಯಮಂತ್ರಿ ಹಾಗೊ ರಾಷ್ಟ್ರ ಬಿಜೆಪಿ ನಾಯಕ ಬಿ.ಎಸ್
ಯಡಿಯೊರಪ್ಪ, ಅಖಿಲ ಭಾರತ ವೀರಶ್ಯವ ಮಹಾಸಭಾದ ಅಧ್ಯಕ್ಷರಾದ ಶಾಮನೂರು
ಶಿವಶಂಕರಪ್ಪ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರಿಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಪ್ರಶಸ್ತಿ ಪ್ರಧಾನ ಮಾಡುವರು.

Home add -Advt

https://pragati.taskdun.com/karnataka-news/foundation-stone-for-veerashiva-lingayata-community-students-hostel/

Related Articles

Back to top button