Advertisement

ಗ್ರಾಮಸ್ಥರಿಂದ ಶಾಸಕರಿಗೆ ಹಿಗ್ಗಾಮುಗ್ಗಾ ತರಾಟೆ

ಪೊಲೀಸರ್ ಸಹಾಯದಿಂದ ಸ್ಥಳದಿಂದ‌ ಕಾಲ್ಕಿತ್ತ ಶಾಸಕ

 

 ಪ್ರಗತಿವಾಹಿನಿ ಸುದ್ದಿ, ರಾಯಬಾಗ – ರಾಯಬಾಗ ಶಾಸಕ ದುರ್ಯೊಧನ ಐಹೊಳೆಗೆ ಮುತ್ತಿಗೆ ಹಾಕಿದ ಕಂಕಣವಾಡಿ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟಗೆ ತಗೆದುಕೊಂಡಿದ್ದಾರೆ.
 ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ನೂರಾರು ಗ್ರಾಮಸ್ಥರು ಶಾಸಕ ಐಹೊಳೆಗೆ ಘರಾವ್ ಹಾಕಿ ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಗ್ರಾಮಸ್ಥರ ಪ್ರತಿಭಟನೆಯಿಂದ ಕಂಗಾಲಾದ ಶಾಸಕರು ಪೊಲೀಸರ್ ಸಹಾಯದಿಂದ ಸ್ಥಳದಿಂದ‌ ಕಾಲ್ಕಿತ್ತರು.
ಶಾಸಕ  ಐಹೊಳೆ  ಸರಕಾರಕ್ಕೆ ಚುಕ್ಕಿ ಗುರುತಿನ ಪ್ರಶ್ನೆ ಕೇಳಿದ್ದ ಹಿನ್ನೆಲೆಯಲ್ಲಿ ಸರಕಾರ ಗೈರಾಣ ಜಮೀನನ್ನು ಖಾಲಿ ಮಾಡಿಸಲು ಮುಂದಾಗಿದೆ. ಕಂಕಣವಾಡಿ ಪಟ್ಟಣದ ಗಾಯರಾಣಾ ಭೂಮಿಯಲ್ಲಿ ಸುಮಾರು 50 ವರ್ಷಗಳಿಂದ  1500 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ.
ಇಂದು ಗ್ರಾಮಸ್ಥರು ಶಾಸಕರ ಮನೆ ಮುಂದೆ  ಪ್ರತಿಭಟನೆ ಮಾಡಲು ನಿರ್ಣಿಸಿದ್ದರು. ಇದನ್ನು ತಿಳಿದ ಶಾಸಕರು ತಾವೇ ಕಂಕಣವಾಡಿ ಗ್ರಾಮಕ್ಕೆ ಆಗಮಿಸಿದ್ದರು.
ಶಾಸಕ‌  ಐಹೊಳೆ‌ ಕಂಕಣವಾಡಿ ಗ್ರಾಮಕ್ಕೆ ‌ಆಗಮಿಸಿ ತಮ್ಮ ಪಕ್ಷದ ಕಾರ್ಯಕರ್ತರ ಮನೆ ಮನೆಗೆ ತೆರಳಿ‌ ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದರು. ಇದರಿಂದ ಕೆರಳಿದ ಇನ್ನುಳಿದ ಗ್ರಾಮಸ್ಥರು ಶಾಸಕನ್ನು‌ ಹಿಗ್ಗಾಮುಗ್ಗಾ ತರಾಟೆಗೆ ತಗೆದು ಕೊಂಡರು.
ಜನರ ತರಾಟೆ, ಪ್ರಶ್ನೆಗೆ ಉತ್ತರಿಸಲಾಗದೆ ಕಂಗಾಲಾದ ಶಾಸಕರು ಪೊಲೀಸರ ಸಹಾಯದಿಂದ ಅಲ್ಲಿಂದ ಪಾರಾದರು.