Latest

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಬೆಳಗಾವಿಗೆ 3 ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ರಾಘವೇಂದ್ರ ರಾಜ್ ಕುಮಾರ್ ಅತ್ಯುತ್ತಮ ನಟ, ಮೇಘನಾ ರಾಜ್ ಅತ್ಯುತ್ತಮ ನಟಿ, ಹಿರಿಯ ನಟ ಶ್ರೀನಿವಾಸ್ ಮೂರ್ತಿ ಡಾಅ. ರಾಜ್ ಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದರು. ನಿರ್ದೇಶಕ ಜೋಸೈಮನ್ ನೇತೃತ್ವದ ಆಯ್ಕೆ ಸಮಿತಿ 162 ಚಿತ್ರಗಳನ್ನ ವೀಕ್ಷಿಸಿ ಪ್ರಶಸ್ತಿ ಆಯ್ಕೆ ಮಾಡಿದ್ದಾರೆ. ಜೊತೆಗೆ ನಿರ್ಮಾಪಕ, ನಟ ಬಸಂತಕುಮಾರ್ ಪಾಟೀಲ್ ನೇತೃತ್ವದ ಸಮಿತಿ ಜೀವಮಾನ ಸಾಧನೆಗಳ ಪ್ರಶಸ್ತಿಯನ್ನು ಆಯ್ಕೆ ಮಾಡಿದೆ.

ಪ್ರಶಸ್ತಿ ಪಟ್ಟಿ ಇಂತಿದೆ:

ಜೀವಮಾನ ಸಾಧನೆ, ಡಾ.ರಾಜ್‌ಕುಮಾರ್ ಪ್ರಶಸ್ತಿ – ಶ್ರೀನಿವಾಸ್ ಮೂರ್ತಿ
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ – ಪಿ. ಶೇಷಾದ್ರಿ, ನಿರ್ದೇಶಕ
ವಿಷ್ಣುವರ್ಧನ್ ಪ್ರಶಸ್ತಿ – ಬಿ.ಎಸ್. ಬಸವರಾಜು
ಅತ್ಯುತ್ತಮ ನಟ – ರಾಘವೇಂದ್ರ ರಾಜ್‌ಕುಮಾರ್(ಅಮ್ಮನ ಮನೆ)
ಅತ್ಯುತ್ತಮ ನಟಿ – ಮೇಘನಾ ರಾಜ್(ಇರುವುದೆಲ್ಲವ ಬಿಟ್ಟು)
ಅತ್ಯುತ್ತಮ ಸಂಗೀತ ನಿರ್ದೇಶನ – ರವಿ ಬಸ್ರೂರ್ (ಕೆಜಿಎಫ್)
ಅತ್ಯುತ್ತಮ ಮೊದಲ ಚಿತ್ರ – ಆ ಕರಾಳ ರಾತ್ರಿ
ಅತ್ಯುತ್ತಮ ಎರಡನೇ ಚಿತ್ರ – ರಾಮನ ಸವಾರಿ
ಅತ್ಯುತ್ತಮ ಮೂರನೇ ಚಿತ್ರ – ಒಂದಲ್ಲ ಎರಡಲ್ಲ
ವಿಶೇಷ ಸಾಮಾಜಿಕ ಕಳಕಳಿ ಚಿತ್ರ – ಸಂತಕವಿ ಕನಕದಾಸರ ರಾಮಧಾನ್ಯ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
ಅತ್ಯುತ್ತಮ ಮಕ್ಕಳ ಚಿತ್ರ – ಹೂವು ಬಳ್ಳಿ
ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ – ಬೆಳಕಿನ ಕನ್ನಡಿ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ – ದೇಯಿ ಬೈದೇತಿ(ತುಳು)
ಅತ್ಯುತ್ತಮ ಪೋಷಕ ನಟ – ಬಾಲಾಜಿ ಮನೋಹರ್(ಚೂರಿಕಟ್ಟೆ)
ಅತ್ಯುತ್ತಮ ಪೋಷಕ ನಟಿ – ವೀಣಾ ಸುಂದರ್(ಆ ಕರಾಳ ರಾತ್ರಿ)
ಅತ್ಯುತ್ತಮ ಕತೆ – ನಾಯಿಗೆರೆ(ಹರೀಶ್.ಎಸ್)
ಅತ್ಯುತ್ತಮ ಚಿತ್ರಕತೆ – ಮೂಕಜ್ಜಿಯ ಕನಸುಗಳು(ಪಿ.ಶೇಷಾದ್ರಿ)
ಅತ್ಯುತ್ತಮ ಸಂಭಾಷಣೆ – ಶಿರಿಷ ಜೋಶಿ (ಸಾವಿತ್ರಿಬಾಯಿ ಫುಲೆ)
ಅತ್ಯುತ್ತಮ ಛಾಯಾಗ್ರಹಣ – ನವೀನ್ ಕುಮಾರ್(ಅಮ್ಮಚ್ಚಿಯೆಂಬ ನೆನಪು)
ಅತ್ಯುತ್ತಮ ಸಂಕಲನ – ಸುರೇಶ್ ಆರುಗ್ಮಂ(ತ್ರಾಟಕ)
ಅತ್ಯುತ್ತಮ ಬಾಲನಟ – ಮಾಸ್ಟರ್ ಆರ್ಯನ್(ರಾಮನ ಸವಾರಿ)
ಅತ್ಯುತ್ತಮ ಬಾಲನಟಿ – ಬೇಬಿ ಸಿಂಚನ(ಅಂದವಾದ)
ಅತ್ಯುತ್ತಮ ಕಲಾ ನಿರ್ದೆಶನ – ಶಿವಕುಮಾರ್ ಜೆ(ಕೆಜಿಎಫ್)
ಅತ್ಯುತ್ತಮ ಗೀತ ರಚನೆ – ಬರಗೂರು ರಾಮಚಂದ್ರಪ್ಪ(ಸಾವೇ.. ಸಾವೇ.. ಗೀತೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಕಲಾವತಿ ದಯಾನಂದ(ದೇಯಿ ಬೈದೇತಿ)
ಹಿನ್ನೆಲೆ ಗಾಯಕ – ಸಿದ್ಧಾರ್ಥ

ಬೆಳಗಾವಿಗೆ 3 ಪ್ರಶಸ್ತಿ

ಇದೇ ಮೊದಲ ಬಾರಿಗೆ ಬೆಳಗಾವಿ ಮೂರು ಚಲನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸಾವಿತ್ರಿಬಾಯಿ ಫುಲೆ, ಬೆಳಕಿನ ಕನ್ನಡಿ ಹಾಗೂ ಸಂತಕವಿ  ಕನಕದಾಸರ ರಾಮಧಾನ್ಯ ಚಿತ್ರಗಳು ಬೆಳಗಾವಿಗೆ ಸಂಬಂಧಿಸಿದವು.

ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ಅವರ ಕಾದಂಬರಿ ಆಧಾರಿತ ಸಾವಿತ್ರಿ ಬಾಯಿ ಫುಲೆ ಚಿತ್ರದ ಸಂಭಾಷಣೆಗಾಗಿ ಬೆಳಗಾವಿ ಶಿರೀಶ್ ಜೋಶಿ ಅವರಿಗೆ ಪ್ರಶಸ್ತಿ ಲಭಿಸಿದೆ. ಈ ಚಿತ್ರ ಸಂಪೂರ್ಣ ಬೆಳಗಾವಿ ಜಿಲ್ಲೆಯಲ್ಲೇ ಚಿತ್ರೀಕರಣಗೊಂಡಿದ್ದು, ವಿಶಾಲ್ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ಎಂ.ಕೆ.ಹೆಗಡೆ ಸೇರಿದಂತೆ ಇಲ್ಲಿಯ ಹಲವಾರು ಕಲಾವಿದರು ನಟಿಸಿದ್ದಾರೆ.

ಡಾ. ಸರಜೂ ಕಾಟ್ಕರ್ ಅವರ ಇಂಗಳೆ ಮಾರ್ಗ ಮತ್ತು ಜುಲೈ 22, 1947 ಚಿತ್ರಗಳು ಈ ಹಿಂದೆ ಪ್ರಶಸ್ತಿ ಪಡೆದಿರುವುದು ಇಲ್ಲಿ ಉಲ್ಲೇಖನೀಯ.

ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರಕ್ಕಾಗಿ ಬೆಳಕಿನ ಕನ್ನಡಿ ಚಿತ್ರ ಆಯ್ಕೆಯಾಗಿದೆ. ಇದು ಬೆಳಗಾವಿ ಉಮೇಶ ಬಡಿಗೇರ (ಹಮ್ಮಿಣಿ) ನಿರ್ದೇಶನದ ಚಲನಚಿತ್ರ.

ಬೆಳಗಾವಿಯ ಹಿರಿಯ ಸಾಹಿತಿ ರಾಮಕೃಷ್ಣ ಮರಾಠೆ ಅವರ ನಾಟಕ ರಾಮಧ್ಯಾನ್ಯ ಆಧರಿತ ಚಲನ ಚಿತ್ರ ಸಂತಕವಿ  ಕನಕದಾಸರ ರಾಮಧಾನ್ಯ ವಿಶೇಷ ಸಾಮಾಜಿಕ ಕಳಕಳಿ ಚಿತ್ರ ಎನ್ನುವ ಪ್ರಶಸ್ತಿಗೆ ಆಯ್ಕೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button