Belagavi NewsBelgaum NewsKannada NewsKarnataka NewsNationalPolitics

*ಕರ್ನಾಟಕ್ಕೆ ಮತ್ತೆ ಹಿನ್ನಡೆ: ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯುಸೆಕ್ ನೀರು ಹರಿಸಲು ಆದೇಶ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ  ಶಿಫಾರಸು ಮಾಡಿದ್ದು, ಕರ್ನಾಟಕ್ಕೆ ಮತ್ತೆ ಹಿನ್ನಡೆಯಾಗಿದೆ‌. 

ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಳಹರಿವು ಇಳಿಕೆಯಾಗುತ್ತಿರುವುದರ ನಡುವೆಯೂ ನೀರು ಹರಿಸುವಂತೆ ಆದೇಶ ಮಾಡಿರುವುದು ಕಾವೇರಿ ಜಲವಿವಾದದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ.

15 ದಿನಗಳ ಕಾಲ ನೀರು ಹರಿಸಬೇಕು. ದಿನಕ್ಕೆ ಅರ್ಧ ಟಿಎಂಸಿ ಅಡಿಯಂತೆ ಒಟ್ಟು 7.8 ಟಿಎಂಸಿ ಅಡಿ ನೀರು ಬಿಡಬೇಕಿದೆ ಎಂದು ಸಿಡಬ್ಲ್ಯುಆರ್‌ಸಿ ಹೇಳಿದೆ

ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ತುಂಬಾ ಬೇಸರವೂ ಆಗುತ್ತದೆ. ಅಧಿಕಾರಿಗಳೆಲ್ಲ ಮಾಹಿತಿಯೊಂದಿಗೆ ಹೋಗಿ ವಾದ ಮಾಡಿದ್ದಾರೆ. ಇದಾದ ಬಳಿಕ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇದೆ. ಅದರಲ್ಲಿ ಬಹಳ ವ್ಯತ್ಯಾಸ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ನಿರ್ವಹಣಾ ಸಮಿತಿಯ ಆದೇಶವನ್ನೂ ನೋಡಿದ ಬಳಿಕ ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ ಎಂದರು.

ಸುಪ್ರಿಂ ಕೋರ್ಟ್‌ಗೆ ನಾವು ಅರ್ಜಿ ಹಾಕಬೇಕಾಗುತ್ತದೆ. ಅಡ್ವಕೇಟ್ ಜನರಲ್ ಜೊತೆಗೆ ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡಬೇಕು. ಎಲ್ಲ ತಜ್ಞರ ಜೊತೆ ಚರ್ಚೆ ಮಾಡಿ ನಾಳೆಯೇ ಮೇಲ್ಮನವಿ ಸಲ್ಲಿಸುವ ತೀರ್ಮಾನ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಕಳೆದ ವಾರದಿಂದಲೇ ಒಳ ಹರಿವು ಕಡಿಮೆ ಆಗಿದೆ.6 ಸಾವಿರ ಕ್ಯುಸೆಕ್ ನೀರು ಬಿಡುವುದು ಕಷ್ಟ ಇದೆ. ಮುಂದಿನ ಹೆಜ್ಜೆ ಏನು ಇಡಬೇಕೆಂದು ನಾಳೆ ತೀರ್ಮಾನ ಮಾಡುತ್ತೇವೆ. ದೆಹಲಿಯಲ್ಲಿ ಕೂತು ಆಡಳಿತ ಮಾಡುವವರಿಗೆ ಸಮಸ್ಯೆ ಅರ್ಥ ಆಗಲ್ಲ. ಇದು ಒಪ್ಪುವಂತ ಆದೇಶ ಅಲ್ಲ. ನೀರು ಬಿಡಬಹುದು ಎಂಬ ಮ್ಯಾನೇಜಿಂಗ್ ಪರಿಸ್ಥಿತಿ ಕೂಡ ಇಲ್ಲ. ಕುಡಿಯುವ ನೀರಿಗೆ ಕೊರತೆ ಇರುವ ಪರಿಸ್ಥಿತಿ ಇದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button