Kannada NewsKarnataka NewsLatest

ಜೊಲ್ಲೆ ಕೋವಿಡ್ ಕೇರ್ ಸೆಂಟರ್ ಗೆ ದಾನಿಗಳ ನೆರವು

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ನಿಪ್ಪಾಣಿಯಲ್ಲಿರುವ ಜೊಲ್ಲೆ ಕೋವಿಡ್ ಕೇರ್ ಸೆಂಟರ್ ಗೆ ವ್ಯಾಪಾರಸ್ಥರಾದ  ಪ್ರವೀಣ್ ಭಾಯಿ ಶಹಾ ಅವರು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ  ಶಶಿಕಲಾ ಜೊಲ್ಲೆ  ಹಾಗೂ ಚಿಕ್ಕೋಡಿ ಲೋಕಸಭೆ ಸಂಸದ  ಅಣ್ಣಾಸಾಹೇಬ ಜೊಲ್ಲೆಯವರಿಗೆ 3 ಆಮ್ಲಜನಕ ಸಾಂದ್ರಕ ( Oxygen Concentrators) ಮೆಷಿನ್ ಅನ್ನು ದಾನ ಮಾಡಿದ್ದಾರೆ.
ಪ್ರಸ್ತುತ ಇಲ್ಲಿರುವ ಆಕ್ಸಿಜನ್ ಬೆಡ್ ಗಳ ಸಂಖ್ಯೆ 27 ಆಗಿವೆ.
ಕೊರೋನಾದಿಂದ ರೋಗಿಗಳನ್ನು ರಕ್ಷಿಸಲು ನಮ್ಮ ಸೇವಾ ಕಾರ್ಯಕ್ಕೆ ಕೈ ಜೋಡಿಸಿದ  ಪ್ರವೀಣ್ ಭಾಯಿ ಶಹಾ ಅವರಿಗೆ ಮನಃಪೂರ್ವಕ ಧನ್ಯವಾದಗಳು. ಜನರ ಆರೋಗ್ಯ ರಕ್ಷಣೆಗಾಗಿ ಮುಕ್ತ ಮನಸ್ಸಿನಿಂದ ದಾನಿಗಳು ನೆರವು ನೀಡಿದಲ್ಲಿ ಅದನ್ನು ಸ್ವೀಕರಿಸಲಾಗುವುದು ಎಂದು ಜೊಲ್ಲೆ ಹೇಳಿದರು.
ಈ ಸಂದರ್ಭದಲ್ಲಿ ನಿಪ್ಪಾಣಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸದಸ್ಯರು ಹಾಗೂ ವೈದ್ಯರು ಉಪಸ್ಥಿತರಿದ್ದರು.

Related Articles

Back to top button