
ಪ್ರಗತಿವಾಹಿನಿ ಸುದ್ದಿ; ತುಮಕೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಠಾತ್ ನಿಧನ ಇಡೀ ಭಾರತೀಯ ಚಿತ್ರರಂಗಕ್ಕೆ ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದ್ದು, ಅಪ್ಪು ಇನ್ನಿಲ್ಲ ಎಂಬ ವಿಷಯವನ್ನು ಅರಗಸಿಕೊಳ್ಳಲು ಕರುನಾಡ ಜನತೆಗೆ ಸಾಧ್ಯವಾಗದ ಸ್ಥಿತಿ. ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಗಳು ಸಾವಿನ ದಾರಿ ಹಿಡಿಯುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿ 6 ದಿನಗಳು ಕಳೆದರೂ ಇನ್ನೂ ಸಾವಿನ ಸರಣಿ ನಿಂತಿಲ್ಲ. ಇದೀಗ ಪುನೀತ್ ಅವರ ಮತ್ತೋರ್ವ ಅಭಿಮಾನಿ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಪುನೀತ್ ಅಪ್ಪಟ ಅಭಿಮಾನಿ ತುಮಕೂರು ತಾಲೂಕಿನ ಹಿರೇಹಳ್ಳಿಯ ಅಪ್ಪು ಶ್ರೀನಿವಾಸ್ (32) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಎರಡು ದಿನಗಳ ಕಾಲ ಪುನೀತ್ ಅಂತಿಮ ದರ್ಶನ ಪಡೆದಿದ್ದ ಅಪ್ಪು ಶ್ರೀನಿವಾಸ್, ಮನೆಗೆ ವಾಪಸ್ ಆಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ನಿನ್ನೆ ತುಮಕೂರಿನ ಹೆಬ್ಬೂರಿನಲ್ಲಿ ಅಪ್ಪು ಅಭಿಮಾನಿ ಭರತ್ ಎಂಬಾತ ಕೂಡ ಆತ್ಮಹತ್ಯೆಗೆ ಶರಣಾಗಿದ್ದ. ಅಪ್ಪು ಅಗಲಿಕೆಯಿಂದ ಆಘಾತಕ್ಕೊಳಗಾದ ಹಲವು ಅಭಿಮಾನಿಗಳು ಸಾವಿನ ದಾರಿ ಹಿಡುಯುತ್ತಿರುವುದು ದುರಂತ.