ಪ್ರಗತಿವಾಹಿನಿ ಸುದ್ದಿ: ಕಳೆದ ವರ್ಷ ತೀವ್ರ ಆತಂಕ ಸೃಷ್ಟಿಸಿದ್ದ ಮಂಕಿಪಾಕ್ಸ್ ಪ್ರಕರಣ ಇದೀಗ ರಾಜ್ಯದಲ್ಲಿಯೂ ಪತ್ತೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 40 ವರ್ಷದ ವ್ಯಕ್ತಿಯೋರ್ವರಲ್ಲಿ ಶಂಕಿತ ಮಕಿಪಾಕ್ಸ್ ಪತ್ತೆಯಾಗಿದೆ.
ದುಬೈಗೆ ಹೋಗಿಬಂದಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ರೀತಿಯ ಲಕ್ಷಣಗಳು ಕಂಡುಬಂದಿದ್ದು, ವಿಕ್ಟೋರಿಯಾ ಆಸ್ಪತ್ತೆಗೆ ದಾಖಲಿಸಲಾಗಿದೆ. ಮಂಕಿಪಾಕ್ಸ್ ಶಂಕೆ ಹಿನ್ನೆಲೆಯಲ್ಲಿ ಎಲ್ಲಾ ವಿಧಗಳ ಪರೀಕ್ಷೆ ನಡೆಸಲಾಗುತ್ತಿದೆ.
ಒಂದು ವೇಳೆಸೋಂಕು ದೃಢವಾದರೆ ಈವರ್ಷದ ಮೊದಲ ಪ್ರಕರಣವಾಗಲಿದೆ. ಅಲ್ಲದೇ ರಾಜ್ಯ ರಾಜಧಾನಿಯಲ್ಲಿ ತೀವ್ರ ಆತಂಕ ಹೆಚ್ಚಿಸುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ