
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :- ತಾಲೂಕಿನ ಭೂತರಾಮನ ಹಟ್ಟಿಯ ಸುಕ್ಷೇತ್ರ ಭೂಕೈಲಾಸ ಎಂದೇ ಹೆಸರಾದ ಮುಕ್ತಿಮಠದ ಪ್ರತಿವರ್ಷದ ಮಕರ ಸಂಕ್ರಮಣ ಜಾತ್ರಾ ಮಹೋತ್ಸವವು ದಿ ೧೪ ರಿಂದ ಆರಂಭವಾಗಿದ್ದು, ದಿ ೧೮ ರ ವರೆಗೆ ಜರುಗಲಿದೆ.
ಕರೋನ ನಿಯಮಗಳ ಅನ್ವಯ ಸರಳವಾಗಿ ಪರಂಪರೆಯ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ, ಶ್ರೀಮುಕ್ತಾಂಬಿಕಾ ದೇವಿ ಅಮ್ಮನವರ ಉತ್ಸವ ಮೂರ್ತಿ ಕಾರ್ಯಕ್ರಮ ಜರುಗಿ ಉಡಿ ತುಂಬುವ ಸೇವೆ, ಕ್ಷೇತ್ರದ ಅಧಿ ದೇವತೆಗಳಿಗೆ ಪೂಜಾದಿ ಸೇರಿದಂತೆ ಧಾರ್ಮಿಕ ಅರ್ಚನೆ ಜರುಗುತ್ತಲಿವೆ.
ಜೊತೆಗೆ ಪ್ರತಿದಿನ ಸಾಯಂಕಾಲ ಆಯೋಜನೆಯಾಗುತ್ತಿರುವ ಧರ್ಮಸಭೆಯಲ್ಲಿ ನಾಡಿನ ಪ್ರಮುಖ ಸ್ವಾಮೀಜಿಗಳು, ಸಾಮಾಜಿಕ, ರಾಜಕೀಯ ಮುಖಂಡರು ಉಪಸ್ಥಿತರಿದ್ದು, ಶ್ರೀ ಧರ್ಮಶ್ರೀ ತಪೋರತ್ನ ಶಿವಶಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದರ್ಶನ ಪಡೆದು, ಪೂಜೆ ಪ್ರವಚನಗಳಲ್ಲಿ ಪಾಲ್ಗೊಳ್ಳುತ್ತಿರುವರು.
ರವಿವಾರದ ಸಂಜೆ ಜರುಗಿದ ಮೂರನೇ ದಿನದ ಧರ್ಮಸಭೆಯು ತಪೋರತ್ನ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಜರುಗಿತು, ಹಿರೇಮುನವಳ್ಳಿಯ ಶ್ರೀ ಶoಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಮಮದಾಪುರದ ಮಲ್ಲಿಕಾರ್ಜುನ ಮಠದ ಮೌನ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ತಾರೀಹಾಳದ ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳು, ಮಾತೋಶ್ರೀ ಕಲಾವತಿ ಹಿರೇಮಠ, ಘಟಪ್ರಭಾದ ಭೀಮಾನಂದ ಸ್ವಾಮಿಗಳು, ಬಸವರಾಜ ಚೌಗಲಾ, ಮೈಸೂರಿನ ಈಶ್ವರ ಠಾಕೂರ, ಬೆಳಗಾವಿಯ ಮುಖ್ಯಶಿಕ್ಷಕರಾದ ಬಸವರಾಜ ಸುಣಗಾರ, ವೇದ ಮೂರ್ತಿ ವೀರೇಶ್ ಹಿರೇಮಠ, ಪಂಚಗ್ರಾಮ ಮುಕ್ತಿಮಠದ ಪಂಚ ಕಮಿಟಿ ಮುಖಂಡರು, ಮುಕ್ತಾಂಭಿಕಾ ಮಹಿಳಾ ಮಂಡಳದವರು, ವಿವಿಧ ಭಾಗದ ಭಕ್ತರು ಉಪಸ್ಥಿತರಿದ್ದರು, ಶಂಕ್ರಯ್ಯಾ ಚರಲಿಂಗಮಠ ಕಾರ್ಯಕ್ರಮ ನಿರೂಪಿಸಿದರು
ಮಂಗಳವಾರ ದಿ ೧೮ ರಂದು ಜಾತ್ರಾ ಮಹೋತ್ಸವ ಶುಭ ಮಂಗಲವಾಗಲಿದ್ದು, ನಾಡಿನ ಹಿರಿಯ ಮಹಾ ಸ್ವಾಮೀಜಿಗಳು ಉಪಸ್ಥಿತಿಯಲ್ಲಿ ದಿವ್ಯಸಾನಿಧ್ಯವನ್ನು ಮಹರ್ಷಿ ಧರ್ಮಶ್ರೀ ತಪೋರತ್ನ ಶಿವಸಿದ್ದ ಸೋಮೇಶ್ವರ್ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು, ಮುತ್ನಾಳದ ಹಿರೇಮಠದ ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು, ಅಧ್ಯಕ್ಷತೆಯನ್ನು ಬ್ರಹ್ಮಾಂಡ ಗುರೂಜಿ ಎಂದೇ ಖ್ಯಾತರಾದ ಬೆಂಗಳೂರು ಶ್ರೀ ಸಂಪೂರ್ಣ ವರಮಹಾಲಕ್ಷ್ಮಿ ಮಹಾ ಸಂಸ್ಥಾನ ಸ್ಥಾಪಕರಾದ ನರೇಂದ್ರ ಶರ್ಮಾ ವಹಿಸುವರು.
ಜನೆವರಿ 26ರಂದು ಮಹತ್ವಕಾಂಕ್ಷೆ ಯೋಜನೆ ಜಾರಿ; ಬೆಳಗಾವಿ ಸೇರಿ 12 ಜಿಲ್ಲೆಗಳಲ್ಲಿ ಜಾರಿ