Latest

ನಾವು ಜೀವಂತವಾಗಿದ್ದೇವೆ, ಯಾರೂ ಸತ್ತಿಲ್ಲ!

ನಾವು ಜೀವಂತವಾಗಿದ್ದೇವೆ, ಯಾರೂ ಸತ್ತಿಲ್ಲ!

ಪ್ರಗತಿವಾಹಿನಿ ಸುದ್ದಿ, ಮುಂಬೈ –

ನಾವು ಜೀವಂತವಾಗಿದ್ದೇವೆ… ಯಾರೂ ಸತ್ತಿಲ್ಲ… ನಮ್ಮಲ್ಲಿ ಯಾವ ಗೊಂದಲವೂ ಇಲ್ಲ…

ಇದು ಅಜ್ಞಾತ ಸ್ಥಳದಲ್ಲಿರುವ ಬಂಡಾಯ ಶಾಸಕರು ಬಿಡುಗಡೆ ಮಾಡಿರುವ ಲೇಟೆಸ್ಟ್ ವೀಡಿಯೋದಲ್ಲಿರುವ ಮಾತು.

ನಾವು ಗನ್ ಪಾಯಿಂಟ್ ನಲ್ಲಿಲ್ಲ. ಸ್ವ ಇಚ್ಛೆಯಿಂದ ಇದ್ದೇವೆ. ವಿಧಾನಸಭೆಯಲ್ಲಿ ಯಾರೋ ಮಾತನಾಡುತ್ತ ನಾವು ಜೀವಂತ ಇದ್ದೇವೋ ಇಲ್ಲವೋ ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಹಾಗಾಗಿ ಈ ವೀಡಿಯೋ ಬಿಡುಗಡೆ ಮಾಡುತ್ತಿದ್ದೇವೆ. ನಾವು ಯಾರೂ ಸತ್ತಿಲ್ಲ. ಎಲ್ಲರೂ ಜೀವಂತವಾಗಿದ್ದೇವೆ ಎಂದಿದ್ದಾರೆ ಬಂಡಾಯ ಶಾಸಕರು.

Home add -Advt

ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಗೆ ಕೊಟ್ಟರೂ ನಾವು ಬರುವುದಿಲ್ಲ. ನಾವು ದುಡ್ಡಿನ ಆಸೆಗಾಗಿ ಇಲ್ಲಿಗೆ ಬಂದಿಲ್ಲ. ಯಾವ ಆಸೆ, ಆಮಿಷಗಳಿಗೂ ಒಳಗಾಗಿಲ್ಲ. ನಮ್ಮಿಂದ ತಪ್ಪಾಗಿದ್ದರೆ ಜನರು ಕ್ಷಮಿಸಬೇಕು ಎಂದೂ ಐವರು ಶಾಸಕರು ಮಾತನಾಡಿರುವ ವೀಡಿಯೋಗಳಲ್ಲಿ ತಿಳಿಸಲಾಗಿದೆ.

ನಮ್ಮ ನಾಯಕರೊಬ್ಬರು, ಲೋಕಸಭೆ ಚುನಾವಣೆ ಮುಂಗಿದ ನಂತರ ಸಮ್ಮಿಶ್ರ ಸರಕಾರ ಉಳಿಸುವುದು ಬೇಡ ಎಂದಿದ್ದರು. ಇನ್ನೂ ಅನೇಕ ವಿಷಯಗಳನ್ನು ಹೇಳುವುದಿದೆ. ಬೆಂಗಳೂರಿಗೆ ಬಂದ ನಂತರ ಪತ್ರಿಕಾಗೋಷ್ಠಿ ನಡೆಸಿ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ ಎಂದೂ ಶಾಸಕರು ಹೇಳಿದ್ದಾರೆ.

ನಾವ್ಯಾರೂ ಅಧಿಕಾರ, ಆಮಿಷಕ್ಕೆ ಒಳಗಾಗಿ ಬಂದವರಲ್ಲ. ಸ್ವಾಭಿಮಾನಕ್ಕಾಗಿ ಬಂದಿದ್ದೇವೆ. ನಾಳೆಯ ಅಧಿವೇಶನಕ್ಕೆ ಬರುವ ಪ್ರಶ್ನೆಯೇ ಇಲ್ಲ. ಎಂಟಿಬಿ ನಾಗರಾಜ ಮತ್ತು ನಾರಾಯಣ ಗೌಡ ಅವರ ಹುಟ್ಟುಹಬ್ಬವನ್ನು ನಾವೆಲ್ಲ ಒಟ್ಟಾಗಿ ಆಚರಿಸಿದ್ದೇವೆ. ಅವರಿಗೆ ಶುಭಾಷಯ ಕೋರಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ಎಸ್.ಟಿ.ಸೋಮಶೇಖರ, ಭೈರತಿ ಬಸವರಾಜ, ರಮೇಶ ಜಾರಕಿಹೊಳಿ, ಮುನಿರತ್ನ ಮೊದಲಾದವರು ವೀಡಿಯೋದಲ್ಲಿ ಮಾತನಾಡಿದ್ದಾರೆ.

ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ –

ಬಂಡಾಯ ಶಾಸಕರಿಂದ ವೀಡಿಯೋ ಬಿಡುಗಡೆ. ಇಲ್ಲಿದೆ 5 ವೀಡಿಯೋ

Related Articles

Back to top button