ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರಧಾನಿ ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಗಂಗಾನದಿಯಲ್ಲಿ ತೀರ್ಥಸ್ನಾನ ಮಾಡಿದ್ದಾರೆ.
ದೇಶದ ಪುಣ್ಯಕ್ಷೇತ್ರ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ಮೋದಿ, ವಾರಣಾಸಿಯ ಕಾಲಭೈರವ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಾಶಿಯ ಲಲಿತ ಘಾಟ್ ಗೆ ತೆರಳಿದ ಪ್ರಧಾನಿ, ಗಂಗಾಸ್ನಾನ ಮಾಡಿ, ಕೆಲಕಾಲ ರುದ್ರಾಕ್ಷಿ ಮಾಲೆ ಹಿಡಿದು ನದಿಯಲ್ಲಿ ಜಪ ಮಾಡಿದರು.
ಗಂಗಾ ನದಿಯಲ್ಲಿ ತೀರ್ಥ ಸ್ನಾನದ ಬಳಿಕ ಕಾಶಿ ವಿಶ್ವನಾಥ ಮಂದಿರಕ್ಕೆ ತೆರಳಿದ್ದು, ಶಿವಲಿಂಗಕ್ಕೆ ಗಂಗಾಜಲ ಅರ್ಪಿಸಲಿದ್ದಾರೆ. ಇಂದು ಸಂಜೆ ಗಂಗಾ ಆರತಿ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.
ಇನ್ನು 339 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಶಿ ವಿಶ್ವನಾಥ ಕಾರಿಡಾರ್ ನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿದ್ದಾರೆ. ದೇಶದ ಪುಣ್ಯಕ್ಷೇತ್ರ ಕಾಶಿ ವಿಶ್ವನಾಥ ಮಂದಿರಕ್ಕೆ ಕಾಯಕಲ್ಪ ನೀಡಬೇಕು ಎಂಬುದು ಪ್ರಧಾನಿ ಮೋದಿ ಮಹದಾಸೆಯಾಗಿತ್ತು. ಇಂದು ನಮೋ ಕನಸು ನನಸಾಗಲಿದೆ. ದಿವ್ಯಕಾಶಿ, ಭವ್ಯಕಾಶಿಗೆ ಹೊಸ ಆಯಾಮ ನೀಡಲಾಗಿದ್ದು, 5 ಲಕ್ಷ ಚದರ ಅಡಿ ಪ್ರದೇಶದಲ್ಲಿ 23 ಕಟ್ಟಡ ನಿರ್ಮಿಸಲಾಗಿದೆ. ಮೋಕ್ಷಧಾಮ, ಮುಕ್ತಿದಾಮಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಹಿಂದೆ ಇದ್ದ ಕಾಶಿ ಕ್ಷೇತ್ರದ ಸಂಪೂರ್ಣ ಚಿತ್ರಣ ಬದಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಸಭೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ