ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಲೋಕಸೇವಾ ಆಯೋಗದ ಕೆಎಎಸ್ ಗ್ರೂಪ್ ಎ ಮತ್ತು ಬಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟಾಗಿದ್ದು, ನೋಂದಣಿ, ಓಎಂಆರ್ ಶೀಟ್ ಅದಲುಬದಲಾಗಿದೆ ಎಂದು ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಹಾಗೂ ಕೋಲಾರ ಪರೀಕ್ಷಾ ಕೇಂದ್ರಗಳಲ್ಲಿ ಓಂಎಂಆರ್ ಶೀಟ್ ನಲ್ಲಿ ನೋಂದಣಿ ಸಂಖ್ಯೆಗಳ ತಪ್ಪುಗಳು ಕಂಡುಬಂದಿದ್ದು ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನಿರಾಕರಿಸಿದ ಘಟನೆ ನಡೆದಿದೆ.
ವಿಜಯಪುರದ ಎರಡು ಪರೀಕ್ಷಾ ಕೇಮ್ದ್ರಗಳಲ್ಲಿ ಮರಠಿ ಮಹಾವಿದ್ಯಾಲಯ ಹಾಗೂ ವಿಕಾಸ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ನೋಂದಣಿ ಸಂಖ್ಯೆ ಹಾಗೂ ಓಎಂಆರ್ ಶೀಟ್ ನಲ್ಲಿ ನಂಬರ್ ಅಡಲು ಬದಲಾಗಿದೆ ಇದನ್ನು ಖಂಡಿಸಿ ಹಲವು ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಅಪರಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಪರೀಕ್ಷಾರ್ಥಿಗಳ ಸಮಸ್ಯೆ ಆಲಿಸಿ ಕೆಪಿಎಸ್ ಸಿ ಅಧಿಕರಿಗಳ ಜೊತೆ ಚರ್ಚಿಸಿದರು. ಬಳಿಕ ನೊಂದಣಿ ಸಂಖ್ಯೆಯನ್ನು ಓಎಂಆರ್ ಶೀಟ್ ನಲ್ಲಿ ಪ್ರತ್ಯೇಕವಾಗಿ ಬರೆದು, ಪರೀಕ್ಷೆ ಬರೆಯಿರಿ, ಹೆಚ್ಚುವರಿ ಸಮಯ ಕೊಡುವುದಾಗಿ ಹೇಳಿ ಮನವೊಲಿಕೆ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ