Kannada NewsKarnataka News

ಕಸ್ತೂರಿ ಪಾಟೀಲ ನಿಧನ

ಪ್ರಗತಿವಾಹಿನಿ ಸುದ್ದಿ, ಅಗಸಗಿ  (ಬೆಳಗಾವಿ) – ನಗರದ ಖಾಸಭಾಗ ಪ್ರದೇಶದ ಬಾಜಾರ ಗಲ್ಲಿಯ  ಪ್ರತಿಷ್ಠಿತ ಪಾಟೀಲ ಕುಟುಂಬದ ನಿವಾಸಿಯಾಗಿದ್ದ ಕಸ್ತೂರಿ ಅಪ್ಪಣ್ಣಾ ಪಾಟೀಲ ಸೋಮವಾರ ಸಾಯಂಕಾಲ 4 ಗಂಟೆಗೆ ನಿಧನರಾದರು.
ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಕೆಲ ವರ್ಷಗಳಿಂದ ವಾಸವಾಗಿದ್ದ ಹನುಮಾನ ನಗರ ಮನೆಯಲ್ಲಿ ತೀರಿಕೊಂಡಿದ್ದಾರೆ. ಇವರಿಗೆ 75 ವರ್ಷ ವಯಸ್ಸಾಗಿತ್ತು.
ಇವರ ಪತಿ ಅಪ್ಪಣ್ಣಾ ಪಾಟೀಲ ಹಿರಿಯ ವಕೀಲರಾಗಿದ್ದು, ಇವರು  ಮೂಲತ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದವರು. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬೆಳಗಾವಿ ಹತ್ತರಗಿಯಲ್ಲಿರುವ “ಏಕಸ್ ಪ್ರೈವೇಟ್ ಲಿಮಿಟೆಡ್” ಅಧ್ಯಕ್ಷ ಮತ್ತು ಮಾಲಿಕರಾದ ಅರವಿಂದ ಮಳ್ಳಿಗೇರಿ ಇವರ ಕಿರಿಯ ಅಳಿಯ.
ಇವರ ಅಂತ್ಯಕ್ರಿಯೆ ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ 4ರ ಭುತರಾಮನಹಟ್ಟಿ ಗ್ರಾಮದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಿಂಬದಿಯಲ್ಲಿರುವ ಅವರ ಹೊಲದಲ್ಲಿ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button