
ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಆರೋಪಿಗಳನ್ನು ಬಂಧಿಸಲಾಗಿದ್ದು ಅವುಗಳ ಪೈಕಿ 9 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಸಿಜೆಎಂ ನ್ಯಾಯಾಲಯದ ಅನುಮತಿ ಪಡೆದು 9 ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಇನ್ನೂ 7 ಜನರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕಳೆದ ಹತ್ತು ದಿನಗಳ ಹಿಂದೆ ನಡೆದಿದ್ದ ಕೆಇಎ ಪರೀಕ್ಷೆಯಲ್ಲಿ ಬ್ಲ್ಯೂಟೂತ್ ಬಳಸಿ ಆರೋಪಿಗಳು ಪರೀಕ್ಷೆ ಬರೆದಿದ್ದರು. 16 ಆರೋಪಿಗಳನ್ನು ವಶಕ್ಕೆ ಪಡಿದ್ದ ಪೊಲೀಸರು, ಅಭ್ಯರ್ಥಿಗಳ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಸರ್ಕಾರ್ ಎಂಬ ಹೆಸರಿನಲ್ಲಿ ಸೇವ್ ಆಗಿದ್ದ ನಂಬರ್ ನಿಂದ ವಾಟ್ಸಪ್ ಕಾಲ್ ಮಾಡಿರುವುದು ಗೊತ್ತಾಗಿದೆ. ಪ್ರಕರಣದ ಪ್ರಮುಖ ಆರೋಪಿ ಬಗ್ಗೆ ಹುಡುಕಾಟ ನಡೆಸಲಾಗಿದ್ದು, ಸರ್ಕಾರ್ ಎಂಬ ಹೆಸರಲ್ಲಿರುವ ಪ್ರಮುಖ ಆರೋಪಿ ಯಾರು ಎಂಬ ತನಿಖೆ ನಡೆಸಲಾಗುತ್ತಿದೆ.