ಪ್ರಗತಿವಾಹಿನಿ ಸುದ್ದಿ; ಉತ್ತರಾಖಂಡ: ಭಾರಿ ಮಳೆ, ಮೇಘಸ್ಫೋಟದಿಂದಾಗಿ ಉತ್ತರಾಖಂಡದಲ್ಲಿ ಪ್ರಯಾಹವುಂಟಾಗಿದ್ದು, ಕೇದಾರನಾಥ ಯತ್ರೆಗೆ ತೆರಳಿದ್ದ ಕನ್ನಡಿಗರು ಪರದಾಟನಡೆಸಿದ್ದಾರೆ.
ಚಿತ್ರದುರ್ಗ, ಶಿವಮೊಗ್ಗ, ಭದ್ರಾವತಿ ಮೂಲದ 40ಕ್ಕೂ ಹೆಚ್ಚು ಕನ್ನಡಿಗರು ಕೇದಾರನಾಥನ ದರ್ಶನಕ್ಕೆ ತೆರಳಿದ್ದು, ಈ ವೇಳೆ ಭಾರಿ ಮಳೆ, ಪ್ರವಾಹದಿಂದಾಗಿ ಭೂಕುಸಿತ, ಗುಡ್ಡಕುಸಿತ ಸಂಭವಿಸಿದೆ. ಹಲವೆಡೆ ಸೇತುವೆಗಳು, ಕಟ್ಟಡಗಳು ಜಲಾವೃತಗೊಂಡಿವೆ. ಇದರಿಂದಾಗಿ ಕನ್ನಡಿಗ ಯಾತ್ರಾರ್ತಿಗಳು ಅತ್ರಂತ್ರಕ್ಕೆ ಸ್ಥಿತಿಯಲ್ಲಿದ್ದಾರೆ.
ಕೇದಾರದಿಂದ ಸುಮಾರು 30 ಕಿ.ಮೀ ದೂರದಲ್ಲಿ ಸಿಲುಕಿಕೊಂಡಿರುವುದಾಗಿ ಕನ್ನಡಿಗರು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಶೀಘ್ರವಾಗಿ ತಮ್ಮನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಚಿತ್ರದುರ್ಗದ ಮೂವರು ಮಹಿಳೆಯರು, ಶಿವಮೊಗ್ಗದ ನಾಲ್ವರು, ಭದ್ರಾವತಿಯ 7 ಹಾಗೂ ಬೆಂಗಳೂರಿನ 26 ಜನರು ಸೇರಿದಂತೆ ಒಟ್ಟು 40 ಕನ್ನಡಿಗರು ಇರುವುದಾಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ