Kannada NewsKarnataka NewsNationalPolitics

*ಕೆಂಪಾಂಬುದಿ ಕೆರೆ ಒತ್ತುವರಿ ಶೀಘ್ರ ತೆರವು: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಹೈಕೋರ್ಟ್ ನಿರ್ದೇಶನದಂತೆ ಕೆರೆಗಳ ಒತ್ತುವರಿ ತೆರವಿಗೆ 16 ವಾರಗಳ ಕ್ರಿಯಾಯೋಜನೆ ತಯಾರಿಸಲಾಗಿದೆ. ಕೆಂಪಾಂಬುದಿ ಕೆರೆಯ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ನ್ಯಾಯಲಯದ ಆದೇಶದಂತೆ ಒತ್ತುವರಿ ತೆರವು ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಶಾಸಕ ರವಿಸುಬ್ರಮಣ್ಯ ಅವರ ಗಮನ ಸೆಳೆವ ಸೂಚನೆಗೆ ಉತ್ತರಿಸಿದ ಡಿಸಿಎಂ ಅವರು, “ಕೆಂಪಾಂಬುದಿ ಕೆರೆಗೆ ರಾಜಕಾಲುವೆ ಮೂಲಕ ಹರಿದು ಬರುವ ತ್ಯಾಜ್ಯ ನೀರನ್ನು ತಡೆಗಟ್ಟಲು ತಿರುವುಗಾಲುವೆ ನಿರ್ಮಿಸಲಾಗಿದೆ. ಆದರೆ ಹೆಚ್ಚು ಮಳೆ ಬಂದಾಗ ಮ್ಯಾನ್ ಹೋಲ್ ಗಳಿಂದ ಉಕ್ಕಿ ಹರಿಯುವ ನೀರು ರಾಜಕಾಲುವೆ ಮೂಲಕ ಕೆರೆ ಸೇರುತ್ತಿದೆ. ಇದನ್ನು ಬಿಡಬ್ಲ್ಯೂ ಎಸ್ ಎಸ್ ಬಿ ಗಮನಕ್ಕೆ ತಂದು ತ್ಯಾಜ್ಯ ನೀರನ್ನು ಸಾಗಿಸುವ ಕೊಳವೆಗಳ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ಕೈಗೊಳ್ಳಲಾಗಿದೆ” ಎಂದರು.

“ಕೆರೆಯ ಕೆಳಭಾಗದಲ್ಲಿ 10 ಲಕ್ಷ ಲೀ. ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡುತ್ತಿದ್ದು, 2025 ರ ವೇಳೆಗೆ ಕಾಮಗಾರಿ ಮುಗಿಯಲಿದೆ.  ಸಂಸ್ಕರಿಸಿದ ನೀರನ್ನು ಕೆರೆಗೆ ಹರಿಸಿ ಪುನರುಜ್ಜೀವನಗೊಳಿಸುವ ಉದ್ದೇಶವಿದೆ” ಎಂದು ಹೇಳಿದ್ದಾರೆ.

ರಸ್ತೆ ವಿಸ್ತರಣೆಗೆ ಶೀಘ್ರ ಭೂಸ್ವಾಧೀನ

Home add -Advt

ಗೊಟ್ಟಿಗೆರೆ ಗ್ರಾಮದ ಸರ್ವೆ ನಂ 98/3 ಮತ್ತು 98/7 ರಲ್ಲಿ ಭಾಗಶಃ ಹಾದು ಹೋಗಲಿದ್ದು ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಬನ್ನೇರುಘಟ್ಟ ಮತ್ತು ಕನಕಪುರ ಮುಖ್ಯ ರಸ್ತೆಯ ಮಧ್ಯೆ ಗೊಟ್ಟಿಗೆರೆ ಬಳಿ 200 ಮೀ ಉದ್ದದ ರಸ್ತೆಯು ಕೇವಲ 20 ಅಡಿಯಿದ್ದು ಸಾಕಷ್ಟು ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂಬ ಕೃಷ್ಣಪ್ಪ ಅವರ ಗಮನ ಸೆಳೆವ ಸೂಚನೆಗೆ, ಶಿವಕುಮಾರ್ ಅವರು “ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿಯ ಗೊಟ್ಟಿಗೆರೆ ಗ್ರಾಮದ ಸರ್ವೆ ನಂ 98/3 ಅಲ್ಲಿನ 0.09 ಗುಂಟೆ ಮತ್ತು 98/7 ರಲ್ಲಿನ 0.07 ಗುಂಟೆ ಜಮೀನನ್ನು ರಸ್ತೆ ವಿಸ್ತರಣೆಗೆ ಸ್ವಾಧೀನ ಮಾಡಿಕೊಳ್ಳಲಾಗುವುದು. 98/7 ರಲ್ಲಿನ 0- 24 ಗುಂಟೆ ಜಮೀನು ಅಂಜನಾಪುರ ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನಗೊಂಡಿದೆ” ಎಂದು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button