Latest

ಉಬರ್ ಹೆಚ್ಚುವರಿ ದರ ಟೀಕೆ ಮಾಡಿದ ಕೆನ್ ಸಿಇಒ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೆನ್ ಸಿಇಒ ರೋಹಿನ್ ಧರ್ಮಕುಮಾರ್ ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಉಬರ್ ರೈಡ್‌ನ ಹೆಚ್ಚುವರಿ ದರಗಳನ್ನು ಟೀಕಿಸಿದ್ದಾರೆ.

“ಬೆಂಗಳೂರು ವಿಮಾನ ನಿಲ್ದಾಣದಿಂದ 1 ಗಂಟೆ ಉಬರ್‌ ಪ್ರಯಾಣಕ್ಕೆ ಮುಂಬೈಗೆ 1.5 ಗಂಟೆಯ ವಿಮಾನದ ದರಕ್ಕಿಂತ ಶೇ. 60 ರಿಂದ 130 ರಷ್ಟು ಹೆಚ್ಚುವರಿ ವೆಚ್ಚವಾಗುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

“ಭಾರತೀಯ ರೈಲ್ವೆ ವಿಮಾನ ನಿಲ್ದಾಣದ ಸಂಪರ್ಕ ರೈಲು ಮತ್ತು ಶಟಲ್ ಬಸ್ ಅನ್ನು ಬಳಸಿ” ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನು ಓದಿದ ಜಾಲತಾಣದ ಬಳಕೆದಾರರೊಬ್ಬರು “ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುವುದಕ್ಕಿಂತ ಹೆಚ್ಚಿನ ಸಮಯ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಲು ತೆಗೆದುಕೊಳ್ಳಬಹುದು” ಎಂದು ತಮಾಷೆ ಮಾಡಿದ್ದಾರೆ.

ಸುಖೇಶ ನಟಿ ಜಾಕ್ವೆಲಿನ್ ಪಾಲಿನ ‘ಕನಸಿನ ಮನುಷ್ಯ’ ನಂತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button