Kannada NewsKarnataka NewsNationalPoliticsTravel
*ಪ್ರಧಾನಮಂತ್ರಿ ಮೋದಿಯಿಂದ ಆರ್ ಎಸ್ ಎಸ್ ಗುಣಗಾನ: ಕೇರಳ ಸಿಎಂ ಟೀಕೆ*

ಪ್ರಗತಿವಾಹಿನಿ ಸುದ್ದಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವನ್ನು ಗುಣಗಾನ ಮಾಡಿದ್ದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಟೀಕಿಸಿದ್ದಾರೆ.
ಈ ಕ್ರಮವು ಸ್ವಾತಂತ್ರ್ಯ ದಿನವನ್ನೇ ಅವಮಾನಿಸಿದಂತೆ ಹಾಗೂ ಸ್ವಾತಂತ್ರ್ಯ ಹೋರಾಟವನ್ನು ಕೀಳಾಗಿಸಿದಂತೆ ಆಗಿದೆ ಎಂದು ಅವರು ಆರೋಪಿಸಿದರು.
ಮೋದಿಯವರ ಆರ್ ಎಸ್ ಎಸ್ ಗುಣಗಾನವು ಸ್ವಾತಂತ್ರ್ಯಕ್ಕೆ ಈ ಸಂಘಟನೆಯೇ ಕಾರಣ ಎಂಬಂತೆ ಚಿತ್ರಿಸುವ ಪ್ರಯತ್ನವಾಗಿದೆ. ಆದರೆ ಮಹಾತ್ಮ ಗಾಂಧಿಯವರ ಹತ್ಯೆಯ ನಂತರ RSS ನಿಷೇಧಕ್ಕೊಳಗಾಗಿತ್ತು. ಇದು ಇತಿಹಾಸವನ್ನು ತಿರುಚುವ ಕೃತ್ಯ ಎಂದು ಖಂಡಿಸಿದರು.
ಆರ್ ಎಸ್ ಎಸ್ ನ ವಿಷಕಾರಿ ಇತಿಹಾಸವನ್ನು ರಾಜಕೀಯ ಭಾಗವಹಿಸುವಿಕೆಯ ಮೂಲಕ ಮರೆಮಾಚಲು ಸಾಧ್ಯವಿಲ್ಲ. ಇಂತಹ ಹಾಸ್ಯಾಸ್ಪದ ಪ್ರಯತ್ನಗಳಿಂದ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.