Latest

ತೊಡೆ ಜೋಡಿಸಿ ಲೈಂಗಿಕ ಕ್ರಿಯೆ ನಡೆಸಿದರೂ ಅತ್ಯಾಚಾರ – ಕೇರಳ ಹೈಕೋರ್ಟ್ ತೀರ್ಪು

ಪ್ರಗತಿವಾಹಿನಿ ಸುದ್ದಿ, ತಿರುವನಂತಪುರ – ಮಹಿಳೆಯ ತೊಡೆಗಳನ್ನು ಜೋಡಿಸಿ ಲೈಂಗಿಕ ಕ್ರಿಯೆ ನಡೆಸಿದರೂ ಅದನ್ನು ಅತ್ಯಾಚಾರ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

ಪಕ್ಕದ ಮನೆಯ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳಹಂತದ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಆದರೆ ಹೈಕೋರ್ಟ್ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಅದಕ್ಕೆ ವಿವರಣೆ ನೀಡಿದೆ.

ನ್ಯಾಯಾಧೀಶರಾದ ಕೆ ವಿನೋದ ಚಂದ್ರನ್ ಮತ್ತು ಜಿಯಾದ ರೆಹಮಾನ್ ಅವರು ಈ ತೀರ್ಪು ನೀಡಿದರು. ಲೈಂಗಿಕ ಕ್ರಿಯೆ ಲೈಂಗಿಕ ಅವಯವದೊಂದಿಗೆ ನಡೆಸಿದರೆ ಮಾತ್ರ ಅತ್ಯಾಚಾರವಲ್ಲ, ತೊಡೆಗಳನ್ನು ಜೋಡಿಸಿ, ಅಸಹಜ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದರೂ ಅದನ್ನು ಅತ್ಯಾಚಾರ ಎಂದೇ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿದರು.

ಆದರೆ ಸಂತ್ರಸ್ತೆ ಯುವತಿಯೋ, ಬಾಲಕಿಯೋ ಎನ್ನುವುದು ಸಲ್ಲಿಸಿದ ದಾಖಲೆಗಳಲ್ಲಿ ಸ್ಪಷ್ಟವಾಗದ್ದರಿಂದ ಪೋಕ್ಸೋ ಕಾಯ್ದೆ ವ್ಯಾಪ್ತಿಯಿಂದ ಪ್ರಕರಣವನ್ನು ಮುಕ್ತಿಗೊಳಿಸಿ, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

5 ಹಿರಿಯ ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೊಮ್ಮಾಯಿ ಮುಂದಿರುವ 5 ಸವಾಲುಗಳೇನು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button